ಸುಳ್ಯ:ಕೆವಿಜಿ ಪಾಲಿಟೆಕ್ನಿಕ್ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ ಸಾರಥ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೆವಿಜಿ ಪಾಲಿಟೆಕ್ನಿಕ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಂಡಿಗದ್ದೆ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ಸೋಲಾರ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ
ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಸೋಲಾರ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಎಸ್. ಡಿ. ಎಮ್ ಕಾನೂನು ಮಹಾವಿದ್ಯಾಲಯ ಮಂಗಳೂರು ಇದರ ಸಹಾಯಕ ಪ್ರಾಧ್ಯಾಪಕರು, ಎನ್ ಎಸ್ ಎಸ್ ಯೋಜನಾಧಿಕಾರಿಗ ಪುಷ್ಪರಾಜ ಕೆ ಮಾತನಾಡಿ ಸಮಾಜ ಕಾರ್ಯದಲ್ಲಿ ತೊಡಗಿಕೊಂಡಿರುವ ಎನ್ ಎಸ್ ಎಸ್ ಹಿರಿಯ ವಿದ್ಯಾರ್ಥಿಗಳು ಕಟ್ಟಿಕೊಂಡಿರುವ ಸಂಘದ ವಿಶಿಷ್ಟವಾದ ಪ್ರಯತ್ನ ಶ್ಲಾಘನೀಯ ಎಂದರು. ಸಭಾಧ್ಯಕ್ಷತೆಯನ್ನು ಟ್ರಸ್ಟ್ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ವಹಿಸಿದ್ದರು. ವೇದಿಕೆಯಲ್ಲಿ ಕೆವಿಜಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಶ್ರೀಧರ ಕೆ, ಸ್ತ್ರೀರೋಗ ತಜ್ಞರಾದ ಡಾ. ವೀಣಾ ಪಾಲಚಂದ್ರ, ಉಪನ್ಯಾಸಕರಾದ ಡಾ. ಅನುರಾಧ ಕುರುಂಜಿ, ಎನ್ಎಸ್ಎಸ್ ಕಾರ್ಯಕ್ರಮಾಕಾರಿ ಚಂದ್ರಶೇಖರ ಬಿಳಿನೆಲೆ, ವಾಚಣ್ಣ ಕೆರೆಮೂಲೆ, ಜಯರಾಮಗೌಡ ಕಂಬಳ, ಸಂಧ್ಯಾ ಕುಮಾರಿ ಬಿ ಎಸ್, ಜಯಂತ ಕೆ,
ಕೆವಿಜಿ ಡೆಂಟಲ್ ಕಾಲೇಜಿನ ಡಾ. ಟೆರ್ರಿ, ಜಯಂತ ತಳ್ಳೂರು, ರಕ್ಷಿತ್ ಬೊಳ್ಳೂರು ಉಪಸ್ಥಿತರಿದ್ದರು. ಸ್ಮಾರ್ಟ್ ಕ್ಲಾಸ್ ನ ದಾನಿಗಳಾದ ಟ್ರಸ್ಟ್ ನ ಉಪಾಧ್ಯಕ್ಷ ವಿಜೇತ ಬೊಳ್ಳೂರು ಮತ್ತು ಕಾರ್ತಿಕ್ ಕಂಬಳ ದಂಪತಿಗಳ ಪರವಾಗಿ ಜಯರಾಮ ಗೌಡ ಕಂಬಳ ಇವರನ್ನು ಗೌರವಿಸಲಾಯಿತು. ಪಾಂಡಿಗದ್ದೆ ಶಾಲಾ ವತಿಯಿಂದ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಇವರನ್ನು ಗೌರವಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ಪುಟಾಣಿ ಕುರ್ಚಿಗಳನ್ನು ಅಧ್ಯಕ್ಷರಾದ ಡಾ. ವೀಣಾ ಪಾಲಚಂದ್ರ ಶಾಲಾ ಪುಟಾಣಿಗಳಿಗೆ ಹಸ್ತಾಂತರಿಸಿದರು.ವೈದ್ಯಕೀಯ ತಪಾಸಣಾ ಶಿಬಿರ,ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಶಾಲಾ ಪುಟಾಣಿಗಳಿಗೆ ಮತ್ತು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು..
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಿತು ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಎನ್ ಆರ್ ಗಣೇಶ್ ವಹಿಸಿದ್ದರು, ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕೆ, ಬಾಲಕೃಷ್ಣ ಗೌಡ ಬೊಳ್ಳೂರು, ನಿವೃತ್ತ ಅಧೀಕ್ಷಕರಾದ ರಾಮಚಂದ್ರಗೌಡ ಪಲ್ಲತಡ್ಕ, ನಿವೃತ್ತ ಉಪನ್ಯಾಸಕರಾದ ಸತ್ಯನಾರಾಯಣ ಪ್ರಸಾದ್, ಪಾಲಚಂದ್ರ ವೈವಿ, ಕೆ ವಿ ಜಿ ಪಾಲಿಟೆಕ್ನಿಕ್ ನ ಉಪ ಪ್ರಾಂಶುಪಾಲರಾದ ಅಣ್ಣಯ್ಯ ಕೆ, ಚಂದ್ರಶೇಖರ್ ಬಿಳಿನೆಲೆ, ಡಾ. ಅನುರಾಧ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿಕುಮಾರ್ ಚಳ್ಳಕ್ಕೋಡಿ, ಅಧೀಕ್ಷಕರಾದ ಶಿವರಾಮ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಸಂಗಮ ಟ್ರಸ್ಟನ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಎಸ್ ಡಿ ಎಮ್ ಸಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಯಶೋಧರ, ಪ್ರಧಾನ ಕಾರ್ಯದರ್ಶಿ ವಿಶ್ವ ಕಿರಣ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಾದ ಅಚಿಂತ್ಯ ಮತ್ತು ಯಾನ್ವಿ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಸುಜಿತ್ ಮಾನ್ಯಡ್ಕ ಧನ್ಯವಾದ ಸಲ್ಲಿಸಿದರು. ಸಹ ಶಿಕ್ಷಕರಾದ ಅಶೋಕ್ ಕುಮಾರ್, ವಿಂದ್ಯಾ, ಶಶಿಕಲಾ ಸಹಕಸಿದರು, ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು.
ಸೇವಾ ಸಂಗಮ ಟ್ರಸ್ಟ್ 5ಕ್ಕೂ ಹೆಚ್ಚು ಹಳ್ಳಿ ಪ್ರದೇಶದ ಅಂಗನವಾಡಿ ಮತ್ತು ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದೆ. ಪಾಂಡಿಗದ್ದೆ ಶಾಲೆಗೆ ಸೋಲಾರ್ ಚಾಲಿತ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದೆ.