ಸುಳ್ಯ:ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ನಡೆಯಿತು. ಶಶಿಕಲಾ ಹರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ವರದಿ ವಾಚಿಸಿದರು. ಜಯಂತಿ ಜನಾರ್ಧನ್ ಲೆಕ್ಕಪತ್ರ ಮಂಡಿಸಿದರು ಮುಂದಿನ ಅವಧಿಗೆ ಪದಾಧಿಕಾರಿಗಳನ್ನು

ಪುಷ್ಪಾ ಮೇದಪ್ಪ,ಲೋಲಾಕ್ಷಿ ದಾಸನಕಜೆ, ಶಾರದಾ ಡಿ. ಶೆಟ್ಟಿ,
ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಪುಷ್ಪಾ ಮೇದಪ್ಪ ಉಪಾಧ್ಯಕ್ಷರಾಗಿ ಗುಣವತಿ ಕೊಲ್ಲಂತಡ್ಕ ಕಾರ್ಯದರ್ಶಿ, ಲೋಲಾಕ್ಷಿ ದಾಸನಕಜೆ, , ಖಜಾಂಜಿ ಶಾರದಾ ಡಿ. ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ವೀಣಾ ಮೋಂಟಡ್ಕ ಸಹ ಖಜಾಂಜಿಯಾಗಿ ಚಂದ್ರಾ ಹೊನ್ನಪ್ಪ, ಸಂಘಟನಾ ಕಾರ್ಯದರ್ಶಿ ಜಯಂತಿ ಜನಾರ್ಧನ, ನಿರ್ದೇಶಕರಾಗಿ ಶಶಿಕಲಾ ಹರಪ್ರಸಾದ್,ಮಮತಾ ಬೊಳುಗಲ್ಲು,ಶಶಿಕಲಾ.ಎ. ಸರಸ್ವತಿ ಕಕ್ಕಾಡು, ಯಶೋಧ ಬಾಳೆಗುಡ್ಡೆ, ಸುಜಾತ ರೈ, ದಿವ್ಯ ಮಡಪ್ಪಾಡಿ, ರಾಜೇಶ್ವರಿ ಕುಮಾರಸ್ವಾಮಿ ಆಯ್ಕೆಯಾದರು.

ಈ ಸಂದರ್ಭ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ ಮತ್ತು ತಾರುಣ್ಯ ಬ್ಯೂಟಿ ಪಾರ್ಲರ್ ಮಾಲಕರಾದ ಕವಿತಾ ರೈ ಇವರನ್ನು ಗೌರವಿಸಲಾಯಿತು. ಸಭೆಯಲ್ಲಿ ಅನುಷ್ಠಾನ ಸಮಿತಿ ಸದಸ್ಯರು ಗ್ರಾಮ ಸಂಚಾಲನಾ ಸಮಿತಿ ಸದಸ್ಯರು ನಿವೃತ್ತ ಶಿಕ್ಷಕಿಯರು ಉಪಸ್ಥಿತರಿದ್ದರು ಪುಷ್ಪಾ ಮೇದಪ್ಪ ವಂದೇ ಮಾತರಂ ಗೀತೆ ಹಾಡಿದರು. ಶಶಿಕಲಾ ಹರಪ್ರಸಾದ್ ಸ್ವಾಗತಿಸಿ, ಸವಿತಾ ಕಾಯರ ವಂದಿಸಿದರು. ಶಾರದಾ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು