ನವದೆಹಲಿ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 13ರಂದು ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಬಜೆಟ್ನಲ್ಲಿ ಘೋಷಣೆ ಮಾಡಲಾಗಿದ್ದ ಈ ಮಸೂದೆಗೆ ಫೆ. 7ರಂದು ಕೇಂದ್ರ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಸಂಸತ್ನ ಹಣಕಾಸು ಸ್ಥಾಯಿ ಸಮಿತಿಯಿಂದ
ಪರಿಶೀಲನೆಯಾಗಿ, ಸಂಸತ್ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಿ ಬದಲಾಗುತ್ತದೆ. 622 ಪುಟಗಳಿರುವ ಐನ್ಕಮ್ ಟ್ಯಾಕ್ಸ್ ಮಸೂದೆ 2025 ಅನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಸಂಸತ್ನಿಂದ ಅಂತಿಮ ಒಪ್ಪಿಗೆ ಮುದ್ರೆ ದೊರೆತ ಬಳಿಕ ಅದು ಕಾಯ್ದೆಯಾಗಲಿದೆ. 2026ರ ಏಪ್ರಿಲ್ನಿಂದ ಈ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.1961ರ ಆದಾಯ ತೆರಿಗೆ ಕಾಯ್ದೆಯ ಬದಲಾಗಿ ಹೊಸ ಕಾಯ್ದೆ ತರಲು ಈ ಮಸೂದೆ ರೂಪಿಸಲಾಗಿದೆ. 622 ಪುಟಗಳು ಇದ್ದು, ಹಳೆಯ ಕಾಯ್ದೆಯ ನಿಯಮ ಮತ್ತು ಕಾನೂನುಗಳನ್ನು ಸರಳಗೊಳಿಸಲಾಗಿದೆ. ಪರಿಭಾಷೆಗಳನ್ನು ಸರಳಗೊಳಿಸಲಾಗಿದೆ ಎಂದು ಸರಕಾರ ಹೇಳಿದೆ