ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 15 ರಿಂದ 22ರ ತನಕ ಪ್ರಿ ಆರ್‌ಡಿಸಿ 2 ಟ್ರೈನಿಂಗ್ & ಸೆಲೆಕ್ಷನ್ ಹಾಗೂ ಸಿಎಟಿಸಿ ಕ್ಯಾಂಪ್ ನಡೆಯಲಿದೆ. ಮಂಗಳೂರು ಗ್ರೂಪ್‌ನ ಅಡಿಯಲ್ಲಿ ಬರುವ
ಮಂಗಳೂರು, ಮಡಿಕೇರಿ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧ ಎನ್‌ಸಿಸಿ ಘಟಕಗಳ 425ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಸಿಸಿ ಕ್ಯಾಡೆಟ್‌ಗಳು ಈ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ. ಕ್ಯಾಂಪ್ ನ ಉದ್ಘಾಟನೆಯನ್ನು ಎಒಎಲ್‌ಇ ಅಧ್ಯಕ್ಷ ಡಾ.ಕೆ. ವಿ. ಚಿದಾನಂದ ನೆರವೇರಿಸುವರು. ಈ ಕ್ಯಾಂಪ್ ಮಂಗಳೂರು ಗ್ರೂಪ್‌ನ ಗ್ರೂಪ್ ಕಮಂಡರ್ ಹಾಗು ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಝೆಪ್ರಿಯನ್ ಗಿಲ್ವರ್ಟ್ ಅರಾನ್ಹಾ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ಕ್ಯಾಂಪ್ ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ 8 ದಿನದ ಕ್ಯಾಂಪ್‌ನ ವ್ಯವಸ್ಥೆಯನ್ನು ಕಾಲೇಜು ಆಡಳಿತ ಮಂಡಳಿ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.