ಪಣಜಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಗೋವಾದಲ್ಲಿ 37ನೇ ಆವೃತ್ತಿಯ ನ್ಯಾಶನಲ್ ಗೇಮ್ಸ್ ಅನ್ನು ಉದ್ಘಾಟಿಸಿದರು. ಭಾರತ 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಸಿದ್ಧವಾಗಿದೆ ಎಂದು ಹೇಳಿದ ಅವರು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಕಾರ್ಯಕ್ರಮದ ಮೂಲಕ ಅಥ್ಲೀಟುಗಳಿಗೆ ಅತ್ಯುತ್ತಮ ತರಬೇತಿ ಸೌಲಭ್ಯ ಸಿಗುವಂತೆ
ನೋಡಿಕೊಳ್ಳಲಾಗಿದೆ. ಭಾರತ 2030ರ ವಿಶ್ವ ಯೂತ್ ಒಲಿಂಪಿಕ್ಸ್ ಹಾಗೂ 2036ರ ಒಲಿಂಪಿಕ್ಸ್ ಆಯೋಜಿಸಲು ಸಜ್ಜಾಗಿದೆ’ ಎಂದರು.
ಇತ್ತೀಚಿನ ವರ್ಷಗಳಲ್ಲಿ ಭಾರತ ಕ್ರೀಡಾಕ್ಷೇತ್ರದಲ್ಲಿ ಸಾಧಿಸುತ್ತಿರುವ ಯಶಸ್ಸು ಯುವ ಮನಸ್ಸುಗಳಿಗೆ ಪ್ರೇರಣಾದಾಯಿಯಾಗಿದೆ ಎಂದು ಹೇಳಿದರು. ಕ್ರೀಡಾಕೂಟ ದಕ್ಷಿಣ ಗೋವಾದ ಫಟ್ರೋಡಾದಲ್ಲಿರುವ ಜವಾಹರ್ಲಾಲ್ ನೆಹರೂ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೈರ್,
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.
ನ್ಯಾಶನಲ್ ಗೇಮ್ಸ್ ಗೋವಾದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿದೆ. ಗೇಮ್ಸ್ ಅ.26ರಿಂದ ನ.9ರ ತನಕ ನಡೆಯಲಿದ್ದು, ದೇಶಾದ್ಯಂತದ 10,000ಕ್ಕೂ ಅಧಿಕ ಕ್ರೀಡಾಳುಗಳು 28 ಸ್ಥಳಗಳಲ್ಲಿ 43 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.