ಸುಳ್ಯ:ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್ನ ಷಟರ್ಗಳನ್ನು ತೆರೆಯಲಾಗುತಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಮ್ನ ಷಟರ್ ತೆರೆದು ನೀರನ್ನು ಹೊರ ಬಿಡಲಾಗುತಿದೆ. ಸಣ್ಣ ನೀರಾವರಿ ಇಲಾಖೆಯ

ತಂತ್ರಜ್ಞರ ತಂಡ ಡ್ಯಾಮ್ನ ಗೇಟ್ ತೆರೆಯಲು ಆರಂಭಿಸಿದ್ದಾರೆ. ಪಯಸ್ವಿನಿ ನದಿಯು ಮೈ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರು ಜಾಗರುಕರಾಗಿ ಇರುವಂತೆ ಜೊತೆಗೆ ನದಿಗೆ ಇಳಿಯದಂತೆ ಸ್ಥಳೀಯ ಆಡಳಿತ ಸೂಚಿಸಿದೆ. ಬಟ್ಟೆ ಒಗೆಯಲು, ಸ್ನಾನಕ್ಕೆ, ಇತರೆ ಕೆಲಸಕ್ಕೆ ನೀರಿಗಿಳಿಯದಂತೆ ಸೂಚಿಸಲಾಗಿದೆ. 12 ಷಟರ್ಗಳನ್ನು ಹಾಕಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದೀಗ ಮಳೆಗಾಲ ಆರಂಭಗೊಂಡ ಹಿನ್ನಲೆಯಲ್ಲಿ ಎಲ್ಲಾ ಷಟರ್ಗಳನ್ನು ಓಪನ್ ಮಾಡಲಾಗುತ್ತದೆ.