ಕಲ್ಲುಗುಂಡಿ:ಸುರಿದ ಭಾರಿ ಗಾಳಿ ಮಳೆಗೆ ಗೂನಡ್ಕ ಮುಖ್ಯರಸ್ತೆಯ ಬದಿಯಲ್ಲಿ ಮನೆಗಳ ಮೇಲೆ ಬೃಹತ್ ಗಾತ್ರದ ಸಾಗುವಾನಿ ಮರ ಬಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ. ಒಂದೇ ಕಟ್ಟಡದಲ್ಲಿರುವ ಮೂರು ಮನೆಗಳ ಮೇಲೆ ಮರ ಬಿದ್ದು ಅದರ ಮೇಲ್ಛಾವಣಿ ಸಂಪೂರ್ಣ ನಾಶವಾಗಿದೆ. ಮೇಲ್ಛಾವಣಿ ಶೀಟ್ಗಳು ಮುರಿದು

ಮನೆಯೊಳಗಿದ್ದ ಮಕ್ಕಳ ಮೇಲೆ ಬಿದ್ದು ಮಕ್ಕಳು ಸೇರಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಶೀಟ್ ಮುರಿದ್ದು ಬಿದ್ದು ಮನೆಯೊಳಗೆ ಇರುವ ವಸ್ತುಗಳು ಮಳೆಗೆ ನಾಶವಾಗಿದೆ. ಮನೆಯೊಳಗೆ ಇರುವ ಬೆಡ್, ಎಲ್ಲಾ ಉಪಕರಣಗಳು ಸಂಪೂರ್ಣ ನಾಶವಾಗಿದ್ದು ಅಪಾರ ನಷ್ಟ ಉಂಟಾಗಿದೆ. ಕಲ್ಲುಗುಂಡಿಯಲ್ಲಿಯೂ ಕೆಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ, ಹಲವೆಡೆ ಗಾಳಿಗೆ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.