ನಿಂತಿಕಲ್ಲು:ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.ಸಂಘದ 12 ನಿರ್ದೇಶಕರ ಸ್ಥಾನದಲ್ಲಿ ಒಂದು ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಯ ಅವಿರೋಧ ಆಯ್ಕೆ ನಡೆದಿತ್ತು. ಜ.17ರಂದು 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಲ್ಲಾ
11 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೇರಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ರೂಪ ರಾಜರಾಜ ರೈ ಕೆ, ರಾಜೇಂದ್ರ ಪ್ರಸಾದ್ ಶೆಟ್ಟಿ, ವಸಂತ ಹೆಚ್.ಕೆ ಹೇಮಳ, ನಾಗೇಶ್ ಆಳ್ವ ಕಟ್ಟಬೀಡು, ಅನೂಪ್ ಬಿಳಿಮಲೆ, ನೇಮಿಶ ಕಡಿರಾ ಆಯ್ಕೆಯಾಗಿದ್ದಾರೆ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ವಸಂತ ನಡುಬೈಲು, ಹಿಂದುಳಿದ ವರ್ಗ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಶಿವರಾಮ ಚಾಮೆತ್ತಡ್ಕ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮುತ್ತಪ್ಪ ಶಾಂತಿನಗರ, ಮಹಿಳಾ ಮೀಸಲು ಸ್ಥಾನದಿಂದ ಸುಧಾರಾಣಿ ಕಡೀರ, ನವ್ಯಶ್ರೀ ಕೆ.ಬಿ.ಅಲೆಂಗಾರ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ದಿನೇಶ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದರು.