ಸುಳ್ಯ: ಮುಡಾ ಪ್ರಕರಣದಲ್ಲಿ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮಂಡಲ
ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ ಮಾತನಾಡಿದರು. ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ಸರೋಜಿನಿ ಪೆಲ್ತಡ್ಕ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ,ನಾರಾಯಣ ಶಾಂತಿನಗರ,ಪ್ರಮುಖರಾದ
ಪಿ.ಕೆ. ಉಮೇಶ್, ಬೂಡು ರಾಧಾಕೃಷ್ಣ ರೈ, ಸೋಮಶೇಖರ ಪೈಕ, ಸುನಿಲ್ ಕೇರ್ಪಳ, ಚಂದ್ರಶೇಖರ ನಡುಮನೆ, ಮಹೇಶ್ ಮೇನಾಲ, ಹರೀಶ್ ಬೂಡುಪನ್ನೆ, ಶಿವರಾಮ ಕೇರ್ಪಳ, ಜಿನ್ನಪ್ಪ ಪೂಜಾರಿ, ಹೇಮಂತ ಕಂದಡ್ಕ, ಚನಿಯ ಕಲ್ತಡ್ಕ,ಶಂಕರ್ ಪೆರಾಜೆ, ಗಿರೀಶ್ ಕಲ್ಲುಗದ್ದೆ, ಕೇಶವ ಮಾಸ್ತರ್, ಶ್ರೀನಿವಾಸ ಮಾಸ್ತರ್, ಅಶೋಕ್ ಅಡ್ಕಾರ್, ಪ್ರದೀಪ್ ಕೊಲ್ಲರಮೂಲೆ, ದಾಮೋದರ ಮಂಚಿ, ಸೋಮನಾಥ ಪೂಜಾರಿ, ದಯಾನಂದ ಕೇರ್ಪಳ, ಜಗನ್ನಾಥ ಜಯನಗರ,ನವೀನ್ ಕುದ್ಪಾಜೆ, ಚಂದ್ರಶೇಖರ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.