ಸುಳ್ಯ: ತನ್ನ ತಂದೆಯ ನಿಧನದ ಹಿನ್ನೆಲೆಯಲ್ಲಿ ಊರಿಗೆ ಶೀಘ್ರ ಬರಲು ಸುಳ್ಯದ ಯುವಕನೋರ್ವರಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವು ನೀಡಿದ್ದಾರೆ. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಗುರುಪ್ರಸಾದ್ ಗೋಳ್ಯಾಡಿ ಅವರು ಜೂ.20ರಂದು ನಿಧನರಾಗಿದ್ದರು. ಅವರ ಮಗ ತ್ರಿಶೂಲ್ ಎರಡು ವರ್ಷಗಳಿಂದ ಮಾಲೀಮ್ಸ್ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದು, ತಂದೆಯ ನಿಧನ ವಿಷಯ ತಿಳಿದು ಊರಿಗೆ ಬರಲು ಪ್ರಯತ್ನಿಸಿದ್ದರು. ಆದರೆ ಪಾಸ್ಪೋರ್ಟ್ ಅಪ್ಡೇಷನ್, ರಜೆ ಮತ್ತಿತರ
ತಾಂತ್ರಿಕ ಕಾರಣಗಳಿಂದ ಸಕಾಲಕ್ಕೆ ತಾಯ್ನಾಡಿಗೆ ಬರಲು ಸಾಧ್ಯವಾಗಿರಲಿಲ್ಲ. ಮನೆಯವರು ಮಗನ ನಿರೀಕ್ಷೆಯಿಂದ ಕೆಲವು ದಿನ ಕಾದು ಕೊನೆಗೆ, ತ್ರಿಶೂಲ್ ತನಗೆ ಬರಲಾಗುವುದಿಲ್ಲ ಎಂದು ತಿಳಿಸಿದ ಹಿನ್ನಲೆಯಲ್ಲಿ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ನೆರವೇರಿತ್ತು.
ಈ ಸಂದರ್ಭದಲ್ಲಿ ತ್ರಿಶೂಲ್ ಅವರ ಹತ್ತಿರದ ಸಂಬಂಧಿಕರು ಸಂಸದರಿಗೆ ಪೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ತ್ರಿಶೂಲ್ನನ್ನು ಕರೆ ತರಲು
ಕೂಡಲೇ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಮೀಮ್ಸ್ ಹೈಕಮಿಷನ್ಗೆ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದರು. ಸಂಸದರ ಮನವಿಗೆ ಮಾಲೀಮ್ಸ್ ಭಾರತೀಯ ರಾಯಭಾರ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು ರಾಯಭಾರ ಕಚೇರಿಯ ಸೂಚನೆಯಂತೆ ಪಾಸ್ಪೋರ್ಟ್, ವಿಸಾ ಪ್ರೊಸೆಸ್ ಶೀಘ್ರ ಪೂರ್ತಿಯಾಗಿ ಖಾಸಗಿ ಕಂಪನಿಯು ರಜೆ ನೀಡಿ ಯುವಕನನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ.ಶುಕ್ರವಾರ ಮುಂಜಾನೆ ಯುವಕ ಊರಿಗೆ ತಲುಪಿದ್ದಾರೆ.ಸಂಸದರಿಗೆ ಕರೆ ಮಾಡಿದಾಗ ತುರ್ತು ಸ್ಪಂದಿಸಿ ತುಂಬ ಉಪಕಾರ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.