ಸುಳ್ಯ: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಕ್ಷೇತ್ರದ ಉಪಚುನಾವಣೆಯ ಮತದಾನ ಅ.21ರಂದು ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ 4 ಗಂಟೆಗೆ ಮುಕ್ತಾಯಗೊಂಡಿತು. ಸುಳ್ಯ ತಾಲೂಕಿನಲ್ಲಿ ಶೇ.97.67 ಮತದಾನವಾಗಿದೆ. 300 ಮತದಾರರ ಪೈಕಿ
138 ಪುರುಷರು ಹಾಗೂ 155 ಮಹಿಳೆಯರು ಸೇರಿ 293 ಮಂದಿ ಮತದಾನ ಮಾಡಿದ್ದಾರೆ. ತಾಲೂಕಿನ 25 ಗ್ರಾಮ ಪಂಚಾಯತ್ ಮತ್ತು ಸುಳ್ಯ ನಗರ ಪಂಚಾಯತ್ ಸದಸ್ಯರು ಹಾಗೂ ಶಾಸಕರು ಸೇರಿ ಒಟ್ಟು 300 ಮತದಾರರು ಇದ್ದರು.
ದಕ್ಷಿಣ ಕನ್ನಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಶೇ.97.91 ಮತದಾನ ದಾಖಲಾಗಿದೆ. 6032 ಮತದಾರರ ಪೈಕಿ 2839 ಪುರುಷರು ಹಾಗೂ 3067 ಮಹಿಳೆಯರು ಸೇರಿ 5906 ಮಂದಿ ಮತದಾನ ಮಾಡಿ ಶೇ.97.91 ಮತದಾನ ದಾಖಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಸಂಸಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಬಿಜೆಪಿ ಅಧ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು ನಾಲ್ಕು ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.