ತಿರುವನಂತಪುರ:ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ನೂತನ ಸಚಿವ ಸಂಪುಟ ಇಂದು(ಮೇ.18ರಂದು) ಅಧಿಕಾರ ಏರುತ್ತಿದ್ದರೂ ಸಚಿವ ಸ್ಥಾನದಿಂದ ಕಾಸರಗೋಡು ಜಿಲ್ಲೆ ವಂಚಿತವಾಗಿದೆ. ಮುಖ್ಯಮಂತ್ರಿ ಸೇರಿ ನೂತನ ಮುಖ್ಯಮಂತ್ರಿ ಹಾಗು 20 ಸಚಿವರುಗಳು ಪ್ರಮಾಣ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಸರಗೋಡು ಮಾತ್ರವಲ್ಲದೆ, ಕೋಝಿಕೋಡ್, ಇಡುಕ್ಕಿ, ಪತ್ತನಂತಿಟ್ಟ ಜಿಲ್ಲೆಗಳಿಗೂ ಸಚಿವ ಸ್ಥಾನ ದೊರೆತಿಲ್ಲ. ಕಾಸರಗೋಡು ಜಿಲ್ಲೆಯಿಂದ
ಮಂಜೇಶ್ವರ ಶಾಸಕರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎ.ಕೆ.ಎಂ. ಅಶ್ರಫ್ ಅವರಿಗೆ ಸಚಿವ ಸ್ಥಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಮುಸ್ಲೀಂ ಲೀಗ್ ಶಾಸಕರಾದ ಅಶ್ರಫ್ ಅವರಿಗೆ ಅವಕಾಶ ದೊರೆಯಲಿಲ್ಲ.ಯುಡಿಎಫ್ ಮೈತ್ರಿಕೂಟದಲ್ಲಿ ಮುಸ್ಲೀಂ ಲೀಗ್ಗೆ 5 ಸಚಿವ ಸ್ಥಾನ ದೊರೆತಿದೆ.ಸಚಿವ ಸ್ಥಾನಕ್ಕೆ ಅಶ್ರಫ್ ಅವರ ಹೆಸರು ಕೇಳಿ ಬಂದಿದ್ದರೂ ಅವಕಾಶ ದೊರೆಯಲಿಲ್ಲ.ಎರಡನೇ ಪಿಣರಾಯಿ ಸರಕಾರದ ಅವಧಿಯಲ್ಲಿಯೂ ಕಾಸರಗೋಡು ಜಿಲ್ಲೆಗೆ ಸಚಿವ ಇರಲಿಲ್ಲ. ಮೊದಲ ಪಿಣರಾಯಿ ಸರಕಾರದಲ್ಲಿ (2016-21) ಕಾಞಂಗಾಡ್ ಶಾಸಕರಾಗಿದ್ದ ಇ.ಚಂದ್ರಶೇಖರನ್ ಕಂದಾಯ ಸಚಿವರಾಗಿದ್ದರು.ಈ ಹಿಂದೆ ಸಿ.ಟಿ.ಅಹಮ್ಮದಾಲಿ, ಚೆರ್ಕಲಂ ಅಬ್ದುಲ್ಲ ಕಾಸರಗೋಡು ಜಿಲ್ಲೆಯಿಂದ ಸಚಿವರಾಗಿದ್ದರು.
ಈ ಬಾರಿ ಜಿಲ್ಲೆಯಲ್ಲಿ ಐದರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರವನ್ನೂ ಯುಡಿಎಫ್ ಗೆದ್ದಾಗ, ಕಾಸರಗೋಡಿಗೆ ಒಂದು ಸಚಿವ ಸ್ಥಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು.29 ಸಾವಿರಕ್ಕೂ ಅಧಿಕ ಬಹುಮತದಿಂದ ಗೆದ್ದ ಯುಡಿಎಫ್ನ ಎಕೆಎಂ ಅಶ್ರಫ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಯುಡಿಎಫ್ ಶಾಸಕರಾಗಿ ಕಾಸರಗೋಡಿನಿಂದ ಆಯ್ಕೆಯಾದ ಕಲ್ಲಟ್ರ ಮಾಯಿನ್ ಹಾಜಿ, ಉದುಮ ಕ್ಷೇತ್ರದಿಂದ ಕೆ.ನೀಲಕಂಠನ್, ತ್ರಿಕ್ಕರಿಪುರ ಕ್ಷೇತ್ರದಿಂದ ಸಂದೀಪ್ ವಾರಿಯರ್ ಮೋದಲ ಬಾರಿಗೆ ಶಾಸಕರಾದ ಕಾರಣ ಸಚಿವರಾಗುವ ನಿರೀಕ್ಷೆ ಇರಲಿಲ್ಲ. ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ವಿವಿಧ ಕಡೆಗಳಿಂದ ಕೇಳಿ ಬಂದಿತ್ತು.














