ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಅರೆಭಾಷೆಯ ಪ್ರಾರಂಭದ ಕವಿ ಹೊದ್ದೆಟ್ಟಿ ಭವಾನಿಶಂಕರ ಇವರ ಸಾಹಿತ್ಯಾವಲೋಕನ ಮತ್ತು ಸ್ಪರ್ಧಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದ್ದರು. ಅರೆಭಾಷೆಯ ಪ್ರಾರಂಭದ ಕವಿ ಭವಾನಿಶಂಕರ ಹೊದ್ದೆಟ್ಟಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿಯ ಮಾಜಿ ಸದಸ್ಯ ಎ.ಕೆ ಹಿಮಕರ ಸಾಹಿತ್ಯಾವಲೋಕನ ಮಾಡಿದರು. ಅಕಾಡೆಮಿಯ ಸದಸ್ಯ ಸೂದನ ಈರಪ್ಪ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್ ಪಿ ಮಾತನಾಡಿದರು.
ವೇದಿಕೆಯಲ್ಲಿ ಅರೆಭಾಷೆ ಅಕಾಡೆಮಿ ಇದರ ಸದಸ್ಯರಾದ ತೇಜಕುಮಾರ್ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕ ರಾಮಕೃಷ್ಣ ಕೆ ಎಸ್, ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಸಂಚಾಲಕ ಬಾಲಕೃಷ್ಣ ಮೇನಾಲ, ಅಧ್ಯಕ್ಷ ಹಿತೇಶ್ ಕೆ.ಡಿ ಉಪಸ್ಥಿತರಿದ್ದರು. ಹಿತೇಶ್ ಕೆ.ಡಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕರಾದ ಎನ್ ಎ ಜ್ಞಾನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಸಂಘದ ಸದಸ್ಯರಾದ ವಶಿಕಾ ಉಳುವಾರು ವಂದಿಸಿದರು. ಯಕ್ಷಿತಾ ಲೆಕ್ಕೆಸಿರಿಮೂಲೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಅರೆಭಾಷೆಯ ಕುರಿತಾದ ವಿವಿಧ ಸ್ಫರ್ಧೆಗಳು ನಡೆಯಿತು.













