ಸುಳ್ಯ:ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ, ಜಾತ್ಯಾತೀತ ಜನತಾದಳ ಮೈತ್ರಿ ಅಭ್ಯರ್ಥಿಗಳಾದ ಡಾ ಧನಂಜಯ ಸರ್ಜಿ (ಪದವೀಧರ ಕ್ಷೇತ್ರ) ಹಾಗೂ ಎಸ್ ಎಲ್ ಭೋಜೇ ಗೌಡ (ಶಿಕ್ಷಕರ ಕ್ಷೇತ್ರ) ಪರವಾಗಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ
ಮತಯಾಚನೆ ಮಾಡಲಾಯಿತು.ಎಲಿಮಲೆ ಜ್ಞಾನದೀಪ, ಸುಬ್ರಹ್ಮಣ್ಯ ಪದವಿ ಕಾಲೇಜು, ಎಸ್ಎಸ್ಪಿಯು ಕಾಲೇಜು,ಸ.ಹಿ.ಪ್ರಾ ಶಾಲೆ ಸುಬ್ರಹ್ಮಣ್ಯ, ಬಿಳಿನೆಲೆ ಗೋಪಾಲಕೃಷ್ಣ , ಸೈಂಟ್ ಮೇರಿಸ್ ಶಾಲೆ ಮರ್ಧಾಳ, ಕ್ನಾನಾಯ ಜ್ಯೋತಿ ಕಡಬ, ಸೈಂಟ್ ಜೋಕಿಮ್ಸ್ ಕಡಬ, ಸೈಂಟ್ ಆನ್ಸ್ ಶಾಲೆ, ಬೆಥನಿ ವಿದ್ಯಾಸಂಸ್ಥೆಗಳು ನೆಲ್ಯಾಡಿ ಬೆಥನಿ ಐಟಿಐ ಸಂಸ್ಥೆಗಳಲ್ಲಿ ಮತಯಾಚನೆ ಮಾಡಲಾಯಿತು.
ಸಂದರ್ಭದಲ್ಲಿ ಪ್ರಮುಖರಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಕೃಷ್ಣಶೆಟ್ಟಿ ಕಡಬ, ಪ್ರದೀಪ್ ರೈ ಮನವಳಿಕೆ, ಆಶಾತಿಮ್ಮಪ್ಪ, ಪುಲಸ್ಯ ರೈ, ಸುರೇಶ್ ದೆಂತಾರು, ಪ್ರಕಾಶ್ ಕಡಬ,ಆಶೋಕ್ ಕಡಬ,ಎಂ ಆರ್ ಕೃಷ್ಣ, ಬಾಲಕೃಷ್ಟ ಬಾಣಜಾಲು, ರವಿಪ್ರಸಾದ್ ನೆಲ್ಯಾಡಿ, ರಮೇಶ ಶೆಟ್ಟಿ, ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.