ಸುಳ್ಯ:ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನ.2ರಂದು ನಡೆದ ಚುನಾವಣೆಯಲ್ಲಿ ಮಹಮ್ಮದ್ ಇಕ್ಬಾಲ್ ಎಲಿಮಲೆ ನೇತೃತ್ವದ ತಂಡ ಗೆಲುವು ಸಾಧಿಸಿ ಅಧಿಕಾರಕ್ಕೇರಿದ್ದಾರೆ. 13 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಏರಿದ್ದಾರೆ.ಸಾಮಾನ್ಯ ಕ್ಷೇತ್ರದಿಂದ
ಮಹಮ್ಮದ್ ಇಕ್ಬಾಲ್ ತಂಡದ ಅಬ್ದುಲ್ ರಹಿಮಾನ್ ಮೇನಾಲ ಈಶ್ವರ ಮಂಗಲ, ಹಸೈನಾರ್ ಎ.ಕೆ.ಕಲ್ಲುಗುಂಡಿ, ಮಹಮ್ಮದ್ ರಫೀಕ್ ಸಿ.ಎಂ.ಐವತ್ತೊಕ್ಲು, ಕೆ.ಬಿ.ಇಬ್ರಾಹಿಂ ಮಂಡೆಕೋಲು, ಮುಹಿಯುದ್ದೀನ್ ಹಾಜಿ ಕೆ.ಎಂ, ಮಹಮ್ಮದ್ ಅನ್ಸಾರ್ ಬೆಳ್ಳಾರೆ,ಮಹಮ್ಮದ್ ಹನೀಫ ಎಸ್.ಕೆ. ಗೆಲುವು ಸಾಧಿಸಿದರೆ ಮಹಮ್ಮದ್ ರಿಯಾಝ್ ಕೆ.ಯು, ಎಸ್.ಎಂ. ಬಾಪೂಸಾಹೇಬ್ ಆಯ್ಕೆಯಾದರು. ಮಹಮ್ಮದ್ ಶರೀಫ್ ಎಂ.ಕೆ (ಶರೀಫ್ ಕಂಠಿ) ಪರಾಭವಗೊಂಡರು.
ಮಹಿಳಾ ಮೀಸಲು ಕ್ಷೇತ್ರದಿಂದ ಮಹಮ್ಮದ್ ಇಕ್ಬಾಲ್ ನೇತೃತ್ವದ ತಂಡದ ಆಮಿನಾ ಎಸ್, ಸಾಜಿದಾ ಜಿ.ಎ, ಗೆಲುವು ಸಾಧಿಸಿದ್ದಾರೆ.
ಅಫೋಲಿನ್ ಡಿಸೋಜಾ, ಜೂಲಿಯಾನ ಕ್ರಾಸ್ತಾ ಪರಾಭವಗೊಂಡರು.
ಹಿಂದುಳಿದ ವರ್ಗ ಎ ಪ್ರವರ್ಗ ಎ ಸ್ಥಾನದಿಂದ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಸ್ಥಾನದಿಂದ ಜಾರ್ಜ್ ಡಿಸೋಜ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
11 ಸ್ಥಾನಗಳಿಗೆ ಚುನಾವಣೆ ನಡೆದರೆ, ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.ಸಾಮಾನ್ಯ ಕ್ಷೇತ್ರದ ಒಂಭತ್ತು ಸ್ಥಾನಗಳಿಗೆ 10 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.ಪ.ಜಾತಿ, ಪ.ಪಂಗಡ ಸ್ಥಾನದಿಂದ ಯಾರೂ ನಾಮಪತ್ರ ಸಲ್ಲಿಸಿಲ್ಲ.















