ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಎರಡನೇ ಪಂದ್ಯದಲ್ಲಿ
ಬಲಿಷ್ಠ ಮಿನಿಷ್ಡ್ರಿ ಆಫ್ ಡಿಫೆನ್ಸ್ ತಂಡವು ಜಯ ಗಳಿಸಿದೆ.ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡವು ನಾಗಪುರದ ಝೀರೋ ಮೈಲ್ ಅಕಾಡೆಮಿ ತಂಡವನ್ನು 49-21 ಅಂಕಗಳ ಅಂತರದಲ್ಲಿ ಮಣಿಸಿತು. ಭರ್ಜರಿ ಆಟ ಪ್ರದರ್ಶಿಸಿದ ಡಿಫೆನ್ಸ್ ತಂಡವು ಆರಂಭದಿಂದಲೇ ಭರ್ಜರಿ ಮುನ್ನಡೆ ಸಾಧಿಸಿ ನಿರಾಯಾಸವಾಗಿ ಪಂದ್ಯವನ್ನು ಗೆದ್ದುಕೊಂಡಿತು.









