ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಮೊದಲ ಪಂದ್ಯದಲ್ಲಿ
ಬಲಿಷ್ಠ ಬಿಪಿಸಿಎಲ್ ಮುಂಬೈ ತಂಡ ಜಯ ಗಳಿಸಿದೆ. ಬಿಪಿಸಿಎಲ್ ತಂಡವು ತಮಿಳುನಾಡಿನ ತೂತುಕುಡಿಯ ದೊರೈ ಸಿಂಗಂ ತಂಡವನ್ನು 36-20 ಪಾಯಿಂಟ್ಗಳ ಅಂತರದಲ್ಲಿ ಮಣಿಸಿತು.ರಾಷ್ಟ್ರೀಯ ಹಾಗು ಪ್ರೊ ಕಬಡ್ಡಿ ಆಟಗಾರರನ್ನೊಳಗೊಂಡ ಬಿಪಿಸಿಎಲ್ ತಂಡವು ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಆರಂಭದಿಂದಲೂ ಭರ್ಜರಿ ದಾಳಿ ಮತ್ತು ಹಿಡಿತದ ಮೂಲಕ ಅಂಕವನ್ನು ಏರಿಸಿದರು. ಆದರೆ ಕೊನೆಯ ಹಂತದಲ್ಲಿ ಪ್ರತಿ ಹೋರಾಟ ನೀಡಿದ ದೊರೈಸಿಂಗಂ ತಂಡವು ಅಂಕವನ್ನು ಏರಿಸಿದರು.









