ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ
ಐಸಿಎಫ್ ಚೆನ್ನೈ ತಂಡವು ತಮ್ಮ ಮೊದಲ ಪಂದ್ಯದಲ್ಲಿ ನಿರಾಯಾಸ ಗೆಲುವು ದಾಖಲಿಸಿತು.ಐಸಿಎಫ್ ತಂಡವು 43-19 ಪಾಯಿಂಟ್ಗಳ ಅಂತರದಲ್ಲಿ ಉಮಾಮಹೇಶ್ವರಿ ಬೆಂಗಳೂರು ತಂಡವನ್ನು ಸೋಲಿಸಿತು. ಭರ್ಜರಿ ಆಟ ಪ್ರದರ್ಶಿಸಿದ ಐಸಿಎಫ್ ತಂಡವು ನಿರಾಯಾಸವಾಗಿ ಪಂದ್ಯವನ್ನು ಗೆದ್ದುಕೊಂಡು ಅಂಕ ಪಟ್ಟಿಯಲ್ಲಿ ಎರಡು ಅಂಕವನ್ನು ಪಡೆದುಕೊಂಡಿತು.









