ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ನನ ಇಲೆಕ್ಟ್ರಾನಿಕ್ಸ್ ವಿಭಾಗದ ಭೋದಕಿ ಸ್ವರ್ಣಲತಾ ಎಂ.ಡಿ ಹಾಗೂ ಇಲೆಕ್ಟ್ರಿಕಲ್ ವಿಭಾಗದ ಸಹಾಯಕ ಭೋದಕ ಅಚ್ಯುತ ಕೆ ವಯೋನಿವ್ರತ್ತಿ ಹೊಂದಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ
ಸಭಾಂಗಣದಲ್ಲಿ ನಡೆಯಿತು. ಎ.ಓ.ಎಲ್.ಇ ಕಮಿಟಿ ‘ಬಿ’ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್ .ಪ್ರಸಾದ್ ಹಾಗೂ ನಿರ್ದೇಶಕ ಮೌರ್ಯ ಆರ್ ಪ್ರಸಾದ್ ನಿವೃತ್ತರನ್ನು ಆಡಳಿತ ಮಂಡಳಿ, ಕೆವಿಜಿ ಪಾಲಿಟೆಕ್ನಿಕ್ ಹಾಗೂ ವಿವಿಧ ವಿಭಾಗಗಳ ವತಿಯಿಂದ ಸನ್ಮಾನಿಸಿದರು.ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪ ಪ್ರಾಂಶುಪಾಲ ಹರೀಶ್ ಕುಮಾರ್ ಪಿ, ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥ ವಿವೇಕ್ ಪಿ, ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥೆ ರಮಾದೇವಿ, ಕಛೇರಿ ಅಧೀಕ್ಷಕ ಶಿವರಾಮ ಕೇರ್ಪಳ ಶುಭ ಹಾರೈಸಿದರು. ಪದ್ಮಾವತಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಢ ಕಾರ್ಯಕ್ರಮದಲ್ಲಿ ಮಹೇಶ್ ಗೊರವರ್ ಹಾಗೂ ಪ್ರಜ್ಞಾ ಕೆ.ಆರ್ ಸನ್ಮಾನ ಪತ್ರ ವಾಚಿಸಿದರು.ಪ್ರಾಂಶುಪಾಲ ಅಣ್ಣಯ್ಯ ಕೆ ಸ್ವಾಗತಿಸಿ ಉಪನ್ಯಾಸಕ ಸುನಿಲ್ ಕುಮಾರ್ ಎನ್.ಪಿ.ವಂದಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.






