ಅಜ್ಜಾವರ:ವಿಶ್ವ ಹಿಂದೂ ಪರಿಷತ್ – ಭಜರಂಗದಳ ಸುಳ್ಯ ಪ್ರಖಂಡ ಆಶ್ರಯದಲ್ಲಿ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು. ಈ ಪ್ರಯುಕ್ತ ತಾಲೂಕು ಮಟ್ಟದ ಮುಕ್ತ ಪುರುಷರ ವಾಲಿಬಾಲ್ ಪಂದ್ಯಾಟ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ ಹಾಗೂ ಸ್ಥಳೀಯ
ಮಹಿಳೆಯರಿಗೆ, ಪುರುಷರಿಗೆ ಹಾಗೂ ಬಾಲಕ, ಬಾಲಕಿಯರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಪದ್ಮನಾಭ ಸ್ವಾಮೀಜಿ, ನವೀನ ಎಲಿಮಲೆ, ಸನತ್ ಚೊಕ್ಕಾಡಿ, ಪ್ರಕಾಶ್ ಯಾದವ್, ಚನಿಯ ಕಲ್ತಡ್ಕ, ಸುಧಾಕರ್ ಪಲ್ಲತ್ತಡ್ಕ, ಶುಬೋದ್ ಶೆಟ್ಟಿ ಮೇನಾಲ, ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ ಹಾಗೂ ಪದಾಧಿಕಾರಿಗಳು, ಸಂಘಟನೆ ಸದಸ್ಯರು, ಕ್ರೀಡಾ ಪಟುಗಳು, ಸ್ಥಳೀಯರು ಉಪಸ್ಥಿತರಿದ್ದರು.