ಟೋಕಿಯೊ:ಜಪಾನ್ನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ 2026 ನಲ್ಲಿ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾ ಬಾಯಿ ಚಾನು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕಗಳನ್ನು ಗೆದ್ದಿರುವ ಮೀರಾಬಾಯಿ ಚಾನು ಏಶ್ಯನ್ ಗೇಮ್ಸ್ನಲ್ಲೂ
ಪದಕ ಜಯಿಸುವ ಮೂಲಕ, ಎಲ್ಲ ಪ್ರಮುಖ ಕ್ರೀಡಾಕೂಟಗಳ ಪದಕಗಳನ್ನು ಮುಡಿಗೇರಿಸಿಕೊಂಡಂತಾಗಿದೆ.1998ರಲ್ಲಿ ಕರ್ಣಂ ಮಲ್ಲೇಶ್ವರಿ ಬ್ಯಾಂಕಾಕ್ನಲ್ಲಿ ರಜತ ಪದಕ ಜಯಿಸಿದ ಬಳಿಕ, ಏಶ್ಯನ್ ಗೇಮ್ಸ್ ನಲ್ಲಿ ಪದಕ ಜಯಿಸಿದ ಪ್ರಥಮ ವೇಟ್ ಲಿಫ್ಟರ್ ಎಂಬ ಹಿರಿಮೆಗೂ ಮೀರಾಬಾಯಿ ಚಾನು ಭಾಜನರಾಗಿದ್ದಾರೆ. ಮೀರಾ ಚಾನು ಒಟ್ಟು 198 ಕೆಜಿ ತೂಕವನ್ನು ಮೇಲೆತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಉತ್ತರ ಕೊರಿಯಾದ ರಿ ಸಾಂಗ್-ಗಮ್ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಮಹಿಳೆಯರ ಶೂಟಿಂಗ್ ಸ್ಕಿಟ್ ತಂಡ ವಿಭಾಗ ಭಾರತೀಯ ಮಹಿಳಾ ಶೂಟರ್ಗಳಾದ ಧಿಲ್ಲೋನ್, ಮಹೇಶ್ವರಿ ಚೌಹಾಣ್ ಮತ್ತು ಪರೀನಾಜ ಧಲಿವಾಲ್ ಅವರನ್ನೊಳಗೊಂಡ ತಂಡವು ಒಟ್ಟು 33 ಅಂಕಗಳನ್ನು ಕಲೆಹಾಕಿ ಕಂಚಿನ ಪದಕ ಪಡೆದರು.






