ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಏಕದಿನ ಮಾದರಿಗೆ ವಿದಾಯ ಹೇಳಿದ್ದಾರೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.36 ವರ್ಷದ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡದ ಪರ
149 ಪಂದ್ಯಗಳಲ್ಲಿ ಆಡಿದ್ದಾರೆ. 4 ಶತಕ, 23 ಅರ್ಧಶತಕ ಸಹಿತ 3,990 ರನ್ ಮತ್ತು 77 ವಿಕೆಟ್ ಗಳಿಸಿದ್ದಾರೆ.2023ರ ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಈ ಮಾದರಿಯ ಶ್ರೇಷ್ಠ ಇನಿಂಗ್ಸ್ ಆಡಿದ್ದ ಮ್ಯಾಕ್ಸ್ವೆಲ್, ಆಸ್ಟ್ರೇಲಿಯಾ 6ನೇ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.ಗಾಯದ ಸಮಸ್ಯೆಯಿಂದ ಬಳಲಿ ಏಕದಿನ ಮಾದರಿಯಲ್ಲಿ ಚೊಚ್ಚಲ ದ್ವಿಶಕದ ಸಾಧನೆ ಮಾಡಿದ್ದ ಮ್ಯಾಕ್ಸ್ವೆಲ್, ತಮ್ಮ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದ್ದರು. ಇದು, ಏಕದಿನ ಕ್ರಿಕೆಟ್ನಲ್ಲಿ ಶ್ರೇಷ್ಠ ಇನಿಂಗ್ಸ್ ಎನಿಸಿಕೊಂಡಿದೆ.
ಮ್ಯಾಕ್ಸ್ವೆಲ್ ಅವರು ಏಕದಿನ ಮಾದರಿಯಲ್ಲಿ 126ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.