ಸುಳ್ಯ: ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮರಾಟಿ ಬಾಂಧವರ ವಾರ್ಷಿಕ ಕ್ರೀಡಾ ಕೂಟ ಫೆ.9ರಂದು ಗಿರಿದರ್ಶಿನಿ ವಠಾರದಲ್ಲಿ ನಡೆಯಲಿದೆ. ಸಮಾಜ ಬಾಂಧವರ ಸಂಘಟನೆಯ ದೃಷ್ಟಿಯಿಂದ
ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಎಲ್.ಕೆ.ಜಿ.,ಯು.ಕೆ.ಜಿ.ಯಿಂದ ಆರಂಭಗೊಂಡು 60ವರ್ಷ ಮೇಲ್ಪಟ್ಟವರಿಗೂ ವಿವಿಧ ಸ್ಪರ್ಧೆಗಳು, ಮನೋರಂಜನಾ ಸ್ಪರ್ಧೆಗಳು ಹಾಗೂ ಗುಂಪು ಸ್ಫರ್ಧೆಗಳು ನಡೆಯಲಿದೆ.
ಕ್ರೀಡಾಕೂಟವನ್ನು ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಉದ್ಘಾಟಿಸಲಿದ್ದಾರೆ. ನ.ಪಂ.ಉಪಾಧ್ಯಕ್ಷ ಜಿ.ಬುದ್ದ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.