ಮಂಡೆಕೋಲು:ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.25ರಂದು ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆದು ಭಕ್ತರ ಹರಸಿತು. ಎ.25ರಂದು ಬೆಳಗ್ಗೆ ಶ್ರೀ ಉಳ್ಳಾಕುಲು ಮತ್ತು
ಪರಿವಾರ ದೈವಗಳ ನೇಮೋತ್ಸವ ನಡೆದು ಇತಿಹಾಸ. ಪ್ರಸಿದ್ಧ ಶ್ರೀ ಉಳ್ಳಾಕುಲು ದೈವದ ಆಡ್ಡಣ ಪೆಟ್ಟು ಉತ್ಸವ ನಡೆದು ಸಿರಿಮುಡಿ ಪ್ರಸಾದ ವಿತರಣೆಯಾಯಿತು. ಬಳಿಕ ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು.














