ಸುಳ್ಯ:ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ದ ಕ ಜಿಲ್ಲಾ ಒಕ್ಕೂಟ ಮಕ್ಕಳ ಮಾಸೋತ್ಸವ ಸಮಿತಿ, ಪೊಲೀಸ್ ಇಲಾಖೆ ಸುಳ್ಯ, ಪ್ರೆಸ್ ಕ್ಲಬ್ ಸುಳ್ಯ ವಿದ್ಯಾ ಸಂಸ್ಥೆ ಸುಳ್ಯ ಇದರ ನೇತೃತ್ವದಲ್ಲಿ ‘ಪಡಿ’ ಸಂಸ್ಥೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ 19 ರಂದು ಮಕ್ಕಳ ಮಾಸೋತ್ಸವ-2024 ರ ಅಂಗವಾಗಿ ಮಕ್ಕಳ ಹಕ್ಕುಗಳ ಕುರಿತು ಪೊಲೀಸ್ ಇಲಾಖೆ ಹಾಗೂ
ಮಾಧ್ಯಮ ವರದಿಗಾರರ ಸಂವಾದ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ನ ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ ನೀರಬಿದಿರೆ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ಭಾಗವಹಿಸಿ ಮಾತನಾಡಿ ‘ಮಕ್ಕಳ ಹಕ್ಕು ಮತ್ತು ಅವರ ರಕ್ಷಣೆಗೆ ಸಂಬಂಧಿಸಿ ಮಕ್ಕಳಿಗೆ ಏನಾದರು ತೊಂದರೆಯಾದಾಗ ವರದಿ ಮಾಡುವ ವೇಳೆ ಪತ್ರಕರ್ತರು ಪಾಲಿಸಬೇಕಾದ ನಿಯಮಗಳ ಕುರಿತು ಮತ್ತು ಮಕ್ಕಳ ರಕ್ಷಣಾ ಕಾರ್ಯದಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಪೊಲೀಸ್ ಅಧಿಕಾರಿಯೊಂದಿಗೆ ಪತ್ರಕರ್ತರು ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ಸಂವಾದ ನಡೆಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿ ಸಂಚಾಲಕಿ ಆಶಾಲತಾ ಸುವರ್ಣ, ಸಿ ಡಿ ಪಿ ಓ ಶೈಲಜಾ, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ಭಾಗವಹಿಸಿದರು.
ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ನಂದ ಕುಮಾರ್ ಸುಳ್ಯ,ನ. ಪಂ ಸದಸ್ಯೆ ಶೀಲಾ ಅರುಣ ಕುರುಂಜಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಮಕ್ಕಳ ಮಾಸೋತ್ಸವ ಜಿಲ್ಲಾ ಸಮಿತಿ ಸದಸ್ಯೆ ಪ್ರೇಮಿ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶಂಕರ್ ಪೆರಾಜೆ ಪ್ರಾಸ್ತವಿಕ ಮಾತನಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಗಾಂಧಿನಗರ ಕೆ ಪಿ ಎಸ್ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ, ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ನಝೀರ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಹಾಗೂ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿಯ ಸಹ ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೋನಪ್ಪ ಕೊಳಗೆ ವಂದಿಸಿದರು.
ಪ್ರಮುಖರಾದ ಉನೈಸ್ ಪೆರಾಜೆ, ಮಂಜುನಾಥ್ ಬಳ್ಳಾರಿ, ಪ್ರೆಸ್ ಕ್ಲಬ್ ಪ್ರ. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ, ಉಪಾಧ್ಯಕ್ಷ ಜೆ ಕೆ ರೈ, ಕೋಶಾಧಿಕಾರಿ ರಮೇಶ್ ನೀರಬಿದ್ರೆ ನಿರ್ದೇಶಕರಾದ ಗಂಗಾಧರ ಮಟ್ಟಿ, ದುರ್ಗಾ ಕುಮಾರ್ ನಾಯರ್ಕೆರೆ, ಶರೀಫ್ ಜಟ್ಟಿಪಳ್ಳ, ಗಿರೀಶ್ ಅಡ್ಪಂಗಾಯ, ಶಿಕ್ಷಣ ಸಂಪನ್ಮೂಲ ಕೇಂದ್ರದ ತರಬೇತುದಾರ ನಾರಾಯಣ ಕಿಲಂಗೋಡಿ ಸಹಕರಿಸಿದರು.