ಸುಳ್ಯ: ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಸ್ಪರ್ಧೆಗಳು ಮತ್ತು ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಮಾ. 23ರಂದು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸಿ.ಡಿ.ಪಿ.ಒ. ಶೈಲಜಾ ದಿನೇಶ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್
ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷೆ ಉಷಾ ಬಿ. ಭಟ್, ಸುಳ್ಯ ಎಂ.ಬಿ. ಫೌಂಡೇಷನ್ ನ ಸಂಚಾಲಕಿ ಹರಿಣಿ ಸದಾಶಿವ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ತ್ರಿವೇಣಿ ದಾಮ್ಲೆ, ಮಾಜಿ ಅಧ್ಯಕ್ಷೆ ಪ್ರಫುಲ್ಲಾ ರೈ, ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕಾಧ್ಯಕ್ಷೆ ನೇತ್ರಾವತಿ ಪಡ್ಡಂಬೈಲು, ಮಾಜಿ ತಾ.ಪಂ. ಅಧ್ಯಕ್ಷೆ ಸುವರ್ಣಿನಿ ಎನ್.ಎಸ್, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್, ಕಾರ್ಯದರ್ಶಿ ಅನಿತಾ ಸುತ್ತುಕೋಟೆ, ಖಜಾಂಜಿ ಚಂದ್ರಾಕ್ಷಿ ಜೆ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ ಪುರಸ್ಕೃತೆ ಅಕ್ಷತಾ ನಾಗನಕಜೆ, ನಾಟಿವೈದ್ಯೆ ಪುಷ್ಪಾವತಿ ಬುಡ್ಲೆಗುತ್ತು, ಸ್ವುದ್ಯೋಗ ಶ್ವೇತಾ ವೇಣುಗೋಪಾಲ್, ನಾಟಿವೈದ್ಯೆ ದೇವಕಿ ತೊಡಿಕಾನ, ಸಾಹಿತಿ ಲೀಲಾದಾಮೋದರ್, ವಿಧುಷಿ ಮಂಜುಶ್ರೀ ರಾಘವ್, ಹೊಲಿಗೆ ಶಿಕ್ಷಕಿ ತಾರಾ ರೈ, ಹೋಮ್ ಗಾರ್ಡ್ ಪುಷ್ಪಾವತಿ,
ಸುಗಮ ಡ್ರೈವಿಂಗ್ ಸ್ಕೂಲ್ ನ ಜಯಲಕ್ಷ್ಮಿ ಅರಂಬೂರು, ನಾಟಿವೈದ್ಯೆ ಮೋಹಿನಿಯವರನ್ನು ಮಹಿಳಾ ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು.

ಸವಿತಾ ಸಂದೀಪ್ ಪ್ರಾರ್ಥಿಸಿದರು. ಮಹಿಳಾ ಮಂಡಲಗಳ ಒಕ್ಕೂಟದ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಾಕ್ಷಿ ಜೆ. ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಳ್ಯ ಮಹಿಳಾ ಸಮಾಜದ ಖಜಾಂಚಿ ರಾಧಾಮಣಿ ಬಿ.ಜಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗಾಗಿ ಸೌಂದರ್ಯ ರಾಣಿ, ಸಾಂಸ್ಕೃತಿಕ ಸೆರಿ ವಿವಿಧ ಸ್ಪರ್ಧೆಗಳು ನಡೆಯಿತು.