ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಅ.24ರಿಂದ 31ರ ತನಕ ನಡೆಯಲಿರುವ ಮದ್ಯ ವರ್ಜನ ಶಿಬಿರದ ಪೂರ್ವಭಾವಿ ಸಭೆ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ
ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಶಿಬಿರದ ಗೌರವಾಧ್ಯಕ್ಷ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ , ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆ ಪಂಜ ವಲಯದ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಜನಜಾಗೃತಿ ವೇದಿಕೆಯ
ಜಿಲ್ಲಾ ಸದಸ್ಯರಾದ ಶಿವಪ್ರಸಾದ್ ಮಾದನ ಮನೆ, ಕೋಅಪ್ಟ್ ಸದಸ್ಯ ಚಂದ್ರಶೇಖರ್ ಕಟ್ಟ, ಪ್ರಗತಿಬಂಧು -ಸ್ವಸಹಾಯ ಸಂಘಗಳ ಒಕ್ಕೂಟ ಪಂಜ ವಲಯದ ಅಧ್ಯಕ್ಷ ಧರ್ಮಪಾಲ ಕನ್ಕಲ್, ಭಜನಾ ಪರಿಷತ್ ವಲಯ ಅಧ್ಯಕ್ಷ ಪ್ರಕಾಶ್ ನರಿಯಂಗ, ಒಕ್ಕೂಟದ ಅಧ್ಯಕ್ಷರಾದ ನಳಿನಿ,ವಾಸುದೇವ ಆನೆ ಮನೆ,ನಿರ್ಮಲ ಪಲ್ಲೋಡಿ,ವಿನೋದ್ ಬೊಳ್ಮಲೆ ಹಾಗೂ ಪದಾಧಿಕಾರಿಗಳು, ಮತ್ತು ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.








