ಸುಳ್ಯ: ದ.ಕ ಜಿಲ್ಲಾ ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಹಾಗೂ ಸುಳ್ಯ ರೇಂಜ್ ಜಂಟಿ ಸಭೆಯು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ ಸಬಾಂಗಣದಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷರಾದ ಎಂ.ಎಚ್ ಮೊಯಿದೀನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದಾರಿತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಈ ನಿಟ್ಟಿನಲ್ಲಿ
ಸಮಸ್ತ ನಡೆಸುತ್ತಿರುವ +2 ವರೆಗಿನ ಮದ್ರಸಗಳು ಪೂರಕವಾಗಿದೆ. 1ನೇ ತರಗತಿಯಿಂದ ಮದ್ರಸ ಕಲಿಕೆ ಆರಂಭಿಸುವ ವಿದ್ಯಾರ್ಥಿಗಳು ಪೂರ್ತಿಗೊಳಿಸದೆ ಅರ್ಧದಲ್ಲಿ ಮೊಟಕುಗೊಳಿಸುತ್ತಿರುವುದು ತಪ್ಪಿಸಬೇಕು. ವಿದ್ಯಾರ್ಥಿಗಳನ್ನು ಮರಳಿ ಮದ್ರಸಕ್ಕೆ ಸೇರಿಸಬೇಕು ಎಂದು ಸಭೆ ಕರೆನೀಡಿತು. ಅಬ್ದುಲ್ ಕರೀಂ ದಾರಿಮಿ ಉಸ್ತಾದ್ ಕುಂಬ್ರ ದುಆ ನೆರೆವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಮುದರ್ರಸರಾದ ನಸೀಹ್ ದಾರಿಮಿ ನೆರೆವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ
ಸ್ವಾಗತಿಸಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಮುಹಮದ್ ನವವಿ ಉಸ್ತಾದ್ ಮುಂಡೋಳೆ ಪ್ರಾಸ್ತಾವಿಕ ಭಾಷಣಗೈದರು. ಸಮಸ್ತ ನಡೆಸುತ್ತಿರುವ ಶೈಕ್ಷಣಿಕ ಕ್ರಾಂತಿ ಬಗ್ಗೆ ಮುಫತ್ತಿಶ್ ಹಂಝ ಫೈಝಿ ಹಾಗೂ ಮ್ಯಾನೇಜ್ಮೆಂಟ್ ಜವಾಬ್ಧಾರಿ ಬಗ್ಗೆ ಇಕ್ಬಾಲ್ ಮಿತ್ತಬೈಲ್ ತರಗತಿ ನಡೆಸಿದರು. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಶುದ್ದೀನ್ ದಾರಿಮಿ ಶುಭ ಹಾರೈಸಿದರು. ಜಿಲ್ಲಾ ಉಪಾಧ್ಯಕ್ಷರಾದ ಅಬೂಸಾಲಿ ಹಾಜಿ ಕಿನ್ಯ ,ಮೆಟ್ರೋ ಶಾಹುಲ್ ಹಮೀದ್ ಹಾಜಿ,ಯೂಸುಫ್ ಬದ್ರಿಯಾ,ಮಯ್ಯದ್ದಿ ಗುಂಡುಕಲ್ಲು ,ಜಿಲ್ಲಾ ಕೋಶಾಧಿಕಾರಿ ಬಾಯಂಬಾಡಿ ಅಬ್ದುಲ್ ಖಾದರ್ ಹಾಜಿ,ಜೊತೆ ಕಾರ್ಯದರ್ಶಿ ರಹಿಮಾನ್,ಸಿದ್ದಿಕ್ ನೀರಾಜೆ,ಬೆಳ್ಳಾರೆ ಜಮಾಅತಿನ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಮಂಗಳ ಹಾಗೂ ಬಹುತೇಕ ಎಲ್ಲಾ ರೇಂಜ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಳ್ಯ ರೇಂಜ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿಯಾದ ಯು.ಪಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸುಳ್ಯ ರೇಂಜ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ ವಂದಿಸಿದರು.