ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 13 ನೇ ಪುಣ್ಯದಿನದ ಪ್ರಯುಕ್ತ ಕೆ.ವಿ.ಜಿ. ಸುಳ್ಯಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಗಸ್ಟ್ 7 ರಂದು ಡಾ.ಕೆ.ವಿ.ಜಿ. ಸಂಸ್ಮರಣಾ ಕಾರ್ಯಕ್ರಮ ಕುರುಂಜಿ ಪ್ರತಿಮೆ ಬಳಿ ಹಾಗೂ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ನಡೆಯಲಿದೆ.ಬೆಳಿಗ್ಗೆ 8.45ಕ್ಕೆ ಡಾ.ಕೆ.ವಿ.ಜಿ. ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲಾಗುವುದು.9.15ಕ್ಕೆ ಸುಳ್ಯಹಬ್ಬ ಸಮಿತಿ ಕಚೇರಿಯಲ್ಲಿ ಡಾ.ಕೆ.ವಿ.ಜಿ.ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಂಶುದ್ದೀನ್ ತಿಳಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post












