ಸುಳ್ಯ:ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈ ಎಸ್,ಎಸ್ಎಸ್ಎಫ್ ಗಾಂಧಿನಗರ ಯೂನಿಟ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ಸಹಕಾರದೊಂದಿಗೆ ಉಚಿತ ಎಕ್ಸರೇ, ಮಧುಮೇಹ ,ರಕ್ತದ ಒತ್ತಡ, ರೋಗ ನಿರ್ಣಯ ಶಿಬಿರ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು.ಕರ್ನಾಟಕ
ಮುಸ್ಲಿಂ ಜಮಾಹತ್ ಯೂನಿಟ್ ಅಧ್ಯಕ್ಷ ಅಬೂಬಕ್ಕರ್ ಕೆ ಎ ಅಧ್ಯಕ್ಷತೆ ವಹಿಸಿದ್ದರು.ಎಸ್ವೈಎಸ್ ಸುಳ್ಯ ಝೋನ್ ಅಧ್ಯಕ್ಷ ಲತೀಫ್ ಸಖಾಫಿ ಗೂನಡ್ಕ ದುವಾಃ ನೆರವೇರಿಸಿದರು.
ಸುಳ್ಯ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಳ್ಯ ನಗರ ಅಭಿವೃದ್ಧಿ ಪ್ರಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ,ಸುಳ್ಯ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ,ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ ,ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್, ಗಾಂಧಿನಗರ
ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಕೆ ಎಂ ಮಹಮದ್,ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಆದಿ, ನಗರ ಪಂಚಾಯತ್ ಮಾಜಿ ಸದಸ್ಯರಾದ ಉಮ್ಮರ್ ಕೆ ಎಸ್ , ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಸುಣ್ಣಮೂಲೆ, ಅಬ್ದುಲ್ ರಹಿಮಾನ್ ಮೊಗರ್ಪಣೆ,ಅಬ್ದುಲ್ ಖಾದರ್ ಆಲೆಟ್ಟಿ, ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸೂಪರ್ ವೈಸರ್ ಲೋಕೇಶ್ ತಂಟೆಪಾಡಿ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ ಪೆಕ್ಟರ್ ಚರಣ್ ಕುಮಾರ್ ಹಾಗೂ ಆರೋಗ್ಯ ಇಲಾಖೆ ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯೂನಿಟ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ ಸ್ವಾಗತಿಸಿ,ಆಬಿದ್ ಕಲ್ಲುಮುಟ್ಲು ವಂಧಿಸಿದರು.ನೌಷಾದ್ ಕೆರೆಮೂಲೆ ಕಾರ್ಯಕ್ರಮ ನಿರೂಪಿಸಿದರು.














