ಸುಳ್ಯ:ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ನೂತನ ಪ್ರಾಂಶುಪಾಲರಾಗಿ ಅನಿಶ್ನಾದ್ ಅಧಿಕಾರ ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಹಾಗೂ ಕೆವಿಜಿ ಸಮೂಹ ಸಂಸ್ಥೆಗಳ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.ಶೈಕ್ಷಣಿಕ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಅಧಿಕ
ಅನುಭವ ಹೊಂದಿರುವ ಅನೀಶ್ನಾದ್ ಅವರು ಬಿ.ಕೆ. ಬಿರ್ಲಾ, ಜಿ.ಡಿ. ಗೊಯೆಂಕಾ ಹಾಗೂ ಎಂಐಟಿ, ವಿ ಜಿ ಎಸ್ ಬಾರ್ಶಿ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಂಶುಪಾಲರಾಗಿ ಹಾಗೂ ಶೈಕ್ಷಣಿಕ ಆಡಳಿತಗಾರರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿದ್ದಾರೆ.
ಕೆವಿಜಿ ಕಮಿಟಿ ‘ಬಿ ‘ಯ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ಶುಭ ಹಾರೈಸಿದರು. ಕೆವಿಜಿ ಐಪಿಎಸ್ನ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ
ಕೆವಿಜಿ ಸಮೂಹ ಸಂಸ್ಥೆಗಳ ವಿವಿಧ ಕಾಲೇಜುಗಲ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ, ಮೋಕ್ಷಾ ನಾಯಕ್, ದಿನೇಶ್ ಮಡ್ತಿಲ, ಸುರೇಶ್.ವಿ, ಅಣ್ಣಯ್ಯ, ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.













