ಕಡಬ:ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತಣಾ ಕಾರ್ಯಕ್ರಮ
ಕಡಬ ಪ್ರೆಸ್ ಕ್ಲಬ್ನಲ್ಲಿ ನಡೆಯಿತು.ಕಡಬ ಪಟ್ಟಣ ಪಂಚಾಯತ್
ಅಧ್ಯಕ್ಷೆ ತಮನ್ನಾ ಜಬಿನ್ ಉದ್ಘಾಟಿಸಿದರು.ಟೀಮ್ ಈಶ್ವರ ಮಲ್ಪೆ ಟ್ರಸ್ಟ್ ಸಂಯೋಜಕ ಲವ ಬಂಗೇರ, ಟೀಮ್ ಈಶ್ವರ ಮಲ್ಪೆಯ ತಜ್ಞ ವೈದ್ಯ ಡಾ. ಪವನ್ ಮಾತನಾಡಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ಲೋಕೇಶ್ ಬಿ. ಎನ್. ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಸುಧಾಕರ ಆಚಾರ್ಯ ಕಾಣಿಯೂರು , ಕೋಶಾಧಿಕಾರಿ ಪ್ರವೀಣ್ರಾಜ್ ಕೆ.ಎಸ್., ಸದಸ್ಯರಾದ ದಿವಾಕರ ಎಂ., ಪ್ರಶಾಂತ್ ಸಿ.ಎಚ್., ತಸ್ಲಿಮ್ ಮರ್ಧಾಳ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವಾಧ್ಯಕ್ಷ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.













