ಸುಳ್ಯ:ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ, ಸಾರ್ವಜನಿಕ ಆಸ್ಪತ್ರೆ ಸುಳ್ಯ,ಜೇಸಿಐ ಸುಳ್ಯ ಪಯಸ್ವಿನಿ ಇವರ ಜಂಟಿ ಆಶ್ರಯದಲ್ಲಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ವ್ಯಕ್ತಿತ್ವ ವಿಕಸನ ತರಬೇತು ತರಬೇತುದಾರರು ಹಾಗು ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಅನುರಾಧ ಕುರುಂಜಿ ಶಿಬಿರ ಉದ್ಘಾಟಿಸಿದರು. ಸುಳ್ಯ ಸಾರ್ವಜನಿಕ ಆಸ್ಪತ್ರೆಯ
ವೈದ್ಯಾಧಿಕಾರಿ ಡಾ. ನವೀನ್ ಎನ್.ಎಸ್.ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಅಧ್ಯಕ್ಷ ಶರತ್ ಕುಮಾರ್,ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ.ಪಿ.
ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ, ಪೂರ್ವಾಧ್ಯಕ್ಷರಾದ ಅಶೋಕ್ ಚೂಂತಾರ್, ದಿನೇಶ್ ಮಡಪ್ಪಾಡಿ, ಉಪಸ್ಥಿತರಿದ್ದರು. ಸುಳ್ಯ ಸರಕಾರಿ ಆಸ್ಪತ್ರೆಯ

ಡಾ. ಶಾಲಿನಿ, ಡಾ ಸೌಮ್ಯ, ಡಾ. ರಜನಿ, ಡಾ. ಶಿವಕುಮಾರ್ ರಕ್ತದಾನದ ಮಹತ್ವವನ್ನು ತಿಳಿಸಿದರು.ಬೆಳಿಗ್ಗಿನಿಂದ ಮಧ್ಯಾಹ್ನ ತನಕ ನಡೆದ ಶಿಬಿರದಲ್ಲಿ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ರಕ್ತದಾನ ಮಾಡಿದರು.
ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳ ತಂಡ ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು.







