ಸುಳ್ಯ:ಈ ಜಗತ್ತನ್ನು ಕಟ್ಟುವವರು ಇಂಜಿನಿಯರ್ಗಳು. ಕಾಲ ಕಾಲಕ್ಕೆ ಆಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ, ತಾಂತ್ರಿಕ ವಿಷಯಗಳಲ್ಲಿ ಅಪ್ಡೇಟ್ ಆಗುತ್ತಾ ಆಧುನಿಕ ಜಗತ್ತನ್ನು ನಿರ್ಮಿಸುವ ಜವಾಬ್ದಾರಿ ಯುವ ಇಂಜಿನಿಯರ್ಗಳ ಮೇಲೆ ಇದೆ ಎಂದು ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ನ ಪ್ರಾಂಶುಪಾಲರಾದ ಡಾ. ಕೆ.ಎನ್. ಸುಬ್ರಹ್ಮಣ್ಯ ಹೇಳಿದರು. ಸುಳ್ಯದ ಅಮರಶ್ರೀಭಾಗ್ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ
ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ತಂತ್ರಜ್ಞಾನ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ, ತಂತ್ರಜ್ಞಾನಗಳು ಪ್ರತಿ ಕ್ಷಣ ಔಟ್ಡೇಟ್ ಆಗ್ತಾ ಇರುತ್ತದೆ. ಆದುದರಿಂದ. ಬದಲಾವಣೆಗೆ ತಕ್ಕಂತೆ ಇಂಜಿನಿಯರ್ಗಳು ತಮ್ಮ ಸಂಶೋಧನೆಯನ್ನೂ ಜ್ಞಾನವನ್ನೂ ವೃದ್ಧಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾವು ಪಡೆದ ಶಿಕ್ಷಣ ಮೂಲಕ ತಾವು ಅಭಿವೃದ್ಧಿಯಾಗಿ ಸಮಾಜದ ಅಭಿವೃದ್ಧಿಗೂ ಪ್ರಯತ್ನ ನಡೆಸಬೇಕು ಆ ಮೂಲಕ ಕಾಲೇಜಿಗೆ, ಪಾಠ ಮಾಡಿದ ಗುರುಗಳಿಗೆ ಉತ್ತಮ ಹೆಸರು ತನ್ನಿ, ಆಧುನಿಕ ಜಗತ್ತಿಗೆ ತಕ್ಕಂತೆ ಉತ್ತಮ ಇಂಜಿನಿಯರ್ಗಳಾಗಿ ಎಂದರು.

ಎ.ಒ.ಎಲ್.ಇ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ಕಾಲೇಜಿನ ಮ್ಯಾಗಜಿನ್ ಬಿಡುಗಡೆ ಮಾಡಿದರು. ಕೆವಿಜಿ ಡೆಂಟಲ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್. ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಿಇಒ ಹಾಗೂ ವಿಟಿಯು ಬೆಳಗಾವಿಯ ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಡಾ. ಉಜ್ವಲ್ ಯು.ಜೆ ಸ್ವಾಗತಿಸಿ
ಪ್ರಾಸ್ತಾವಿಕ ಮಾತನಾಡಿ ಯುವ ಇಂಜಿನಿಯರ್ಗಳು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ, ಸಮಾಜದ ಉನ್ನತಿಗೆ ಕೊಡುಗೆ ನೀಡಿ, ಆ ಮೂಲಕ ತಂದೆ ತಾಯಿ, ಪೋಷಕರು, ಗುರುಗಳಿಗೆ ಗೌರವ ತನ್ನಿ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಭಾಗ ಮುಖ್ಯಸ್ಥೆ ಹಾಗೂ ಕಾಲೇಜು ಮ್ಯಾಗಜಿನ್ನ ಪ್ರಧಾನ ಸಂಪಾದಕರಾದ ಡಾ. ಸವಿತಾ ಸಿ.ಕೆ ಸಂಪಾದಕೀಯ ನುಡಿಗಳನ್ನಾಡಿದರು. ಡೀನ್ ಅಕಾಡೆಮಿಕ್ ಮತ್ತು ಪ್ರೊಫೆಸರ್ ಡಾ. ಪ್ರಜ್ಞಾ ಎಂ.ಆರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.ಕೆವಿಜಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಡಾ. ರೇಣುಕಾಪ್ರಸಾದ್ ಕೆ.ವಿ. ಚಿನ್ನದ ಪದಕ ನೀಡಿ ಅಭಿನಂದಿಸಿದರು. ವಿಭಾಗ ಮುಖ್ಯಸ್ಥರುಗಳಾದ ಡಾ. ಚಂದ್ರಶೇಖರ್, ಡಾ. ಕುಸುಮಾಧರ್, ಡಾ. ಕೃಷ್ಣಾನಂದ ಮತ್ತು ಪ್ರೊ. ರಾಮಚಂದ್ರ ಕಾಮತ್ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶ್ರೀಧರ್ ವಂದಿಸಿದರು. ಪ್ರೊ. ಕೃಷ್ಣರಾಜ್ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ. ಭವ್ಯ ಮತ್ತು ಪ್ರೊ. ಅಶ್ವಿಜ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ವಿ,ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.