ಸುಳ್ಯ: ಭಾರೀ ಮಳೆ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಕುಮಾರಧಾರಾ ತುಂಬಿ ಹರಿಯುತ್ತದೆ. ನದಿಯ ನೀರು ರಸ್ತೆಗೆ ಬಂದಿದ್ದು, ಕುಕ್ಕೆ ಸುಬ್ರಹ್ಮಣ್ಯ -ಪುತ್ತೂರು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗಿದೆ. ಕುಮಾರಧಾರಾ ನದಿ ತಟದ ಸ್ನಾನಘಟ್ಟ ಭಾರೀ ಮಳೆ ಹಿನ್ನಲೆಯಲ್ಲಿ
ಮುಳುಗಡೆಯಾಗಿದೆ. ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದೆ.ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ನಿಯೋಜನೆ ಮಾಡಲಾಭದ್ರತೆ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
ಹೋಮ್ ಗಾರ್ಡ್ ನಾಲ್ಕು ಜನ ಸಿಬಂಧಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದಿಂದ ಪುತ್ತೂರು ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.