ಸುಳ್ಯ: ಸುಳ್ಯದಲ್ಲಿ ಭಾರೀ ಮಳೆಯಾಗುತಿದೆ. ಶುಕ್ರವಾರ ಬೆಳಿಗ್ಗಿನಿಂದ ಎಡೆಬಿಡದೆ ಮಳೆ ಸುರಿಯುತಿದೆ. ಇದೀಗ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದಿಂದ ಧಾರಾಕಾರ ಮಳೆ ಮಳೆಮುಂದುವರಿದಿದೆ. ಕತ್ತಲು ಕವಿದ ವಾತಾವರಣವಿದ್ದು ನಿರಂತರ ಮಳೆಯಾಗುತಿದೆ. ಸುಳ್ಯ ನಗರದ ಹೋಟೆಲ್, ಅಂಗಡಿಗಳಿಗೆ ನೀರು ನುಗ್ಗಿ. ಸುಳ್ಯ ನಗರದ ಜಟ್ಟಿಪಳ್ಳ ಕ್ರಾಸ್ನ
ಪೂಜಾ ಹೋಟೆಲ್ಗೆ ಮಳೆ ನೀರು ನುಗ್ಗಿದ್ದು ಅಸ್ತವ್ಯಸ್ತವಾಗಿದೆ. ಇಲ್ಲಿ ಹೋಟೆಲ್ ಒಳಗೆ ಮಳೆ ನೀರು ಸೇರಿದ್ದು ಕೆರೆಯಂತಾಗಿದೆ.
ಗುರುವಾರ ರಾತ್ರಿಯೂ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸುಳ್ಯ ನಗರದಲ್ಲಿ 142 ಮಿ.ಮಿ.ಮಳೆ ಸುರಿದಿದೆ ಎಂದು ಸುಳ್ಯ ನಗರದಲ್ಲಿ ಮಳೆ ದಾಖಲೆ ಸಂಗ್ರಹಿಸುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ
100 ಮಿ.ಮಿ.ಗಿಂತ ಅಧಿಕ ಮಳೆ ಸುರಿದಿದೆ. ಇದೀಗ ಸುಳ್ಯದಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜನರು ಹೊರಬರಲು ಆಗದ ರೀತಿಯಲ್ಲಿ ಮಳೆ ಸುರಿಯುತಿದೆ. ಸುಳ್ಯ ನಗರದಲ್ಲಿ ಮಳೆ ನೀರು, ಕೆಸರು ನೀರು ರಸ್ತೆಯಲ್ಲಿಯೇ ಹರಿಯುತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿ
ಇಲ್ಲದ ಕಾರಣ ಮುಖ್ಯ ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿದೆ. ವಾಹನಗಳು ಸಂಚಾರ ಮಾಡುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ಪಾದಾಚಾರಿಗಳ ಮೇಲೆ ಕೆಸರು ಮಿಶ್ರಿತ ಮಳೆ ನೀರು ಸಿಂಚನ ಆಗುತಿದೆ.
ಚಿತ್ರಗಳು: ನವೀನ್, ಗೋಪಾಲ್ ಸ್ಟುಡಿಯೋ.