ಕೊಯನಾಡು: ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮದ ಸಡಗರದ ಬಕ್ರೀದ್ ಆಚರಿಸಲಾಯಿತು ಈದ್ ನಮಾಝ್, ಖುತುಬಾ, ಸಾಮೂಹಿಕ ಪ್ರಾರ್ಥನೆ ಜರುಗಿತು.ತ್ಯಾಗ ಮತ್ತು
ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಲ್ಲಿ ಪರಸ್ಪರ ಸಹೋದರತೆ ಮತ್ತು ಬಾಂಧವ್ಯವನ್ನು ಭದ್ರಗೊಳಿಸಬೇಕು ಎಂದು ಮಹಮ್ಮದ್ ಸಖಾಫಿ ಅಲ್ ಹಿಕಮಿ ಅವರು ಹೇಳಿದರು. ಜಮಾಅತಿನ ಸರ್ವ ಸದಸ್ಯರು, ಊರಿನವರು ಭಾಗವಹಿಸಿದ್ದರು ನಂತರ ಖಬರ್ ಝಿಯಾರತ್ ನಡೆಸಲಾಯಿತು ಮರಣ ಹೊಂದಿದ ಸದಸ್ಯರನ್ನು ಸ್ಮರಿಸಲಾಯಿತು. ಸದಸ್ಯರು ಶುಭಾಶಯ ಕೋರಿದರು.