ಸುಳ್ಯ: ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ
ನವೆಂಬರ್ 7 ಮಂಗಳವಾರ ಸುಳ್ಯ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 10 ಗಂಟೆಗೆ ಕನಕಮಜಲು ಗ್ರಾಮ
ಪಂಚಾಯತ್ಗೆ ಆಗಮಿಸುವ ಅವರು 11-15 ಗಂಟೆಗೆ ಜಾಲ್ಸೂರು ಗ್ರಾಮ ಪಂಚಾಯತ್ ಭೇಟಿ ನೀಡುವರು.12-30 ಗಂಟೆಗೆ ಸುಳ್ಯ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. 2-30 ಗಂಟೆಗೆ ಸುಳ್ಯ ನಗರ ಪಂಚಾಯತ್ ಘನತಾಜ್ಯ ನಿರ್ವಹಣಾ ಘಟಕ ಕಲ್ಚರ್ಪೆಗೆ ಭೇಟಿ ನೀಡಲಿದ್ದಾರೆ.4 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಪ್ರಕಟಣೆ ತಿಳಿಸಿದೆ.











