ಸುಬ್ರಹ್ಮಣ್ಯ:ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ನ ನೂತನ ಲೋಗೋವನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ
ಲೋಗೋ ಬಿಡುಗಡೆ ಮಾಡಿ ಸಚಿವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಸುಬ್ರಮಣ್ಯ ಪ್ರೆಸ್ ಕ್ಲಬ್ನ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಶಿವರಾಮ ಕಜಮೂಲೆ, ಉಪಾಧ್ಯಕ್ಷ ಲೋಕೇಶ್ ಬಿ ಎನ್. ನಿರ್ದೇಶಕರಾದ ಸಂತೋಷ ನೂಚಿಲ,ಪ್ರಕಾಶ್ ಕಡಬ, ಗಣೇಶ ಅನಿಲ ಮುಂತಾದವರು ಉಪಸ್ಥಿತರಿದ್ದರು.














