ಗುವಾಹಟಿ:ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ 8 ವಿಕೆಟ್ಗಳ ಸುಲಭ ಜಯ ದಾಖಲಿಸಿತು.152 ರನ್ಗಳ ಗೆಲುವಿನ ಗುರಿ ಪಡೆದ ಕೆಕೆಆರ್ 17.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಗೆಲುವಿನ ನಗೆ ಬೀರಿತು.ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 61 ಎಸೆತಗಳಲ್ಲಿ
8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಗಳಿಸಿ ಗೆಲುವಿನ ರುವಾರಿಯಾದರು. ಅಜಿಂಕ್ಯಾ ರಹಾನೆ 18, ರಘುವಂಶಿ ಅಜೇಯ 22 ರನ್ ಗಳಿಸಿದರು.ಟಾಸ್ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಯಲ್ಸ್ ಮೊದಲು ಬ್ಯಾಟಿಂಗ್
ಮಾಡಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ಗಳಿಸಿತು. ಜುರೆಲ್ 33, ಜೈಸ್ವಾಲ್ 29, ಪರಾಗ್ 25 ರನ್ಗಳಿಸಿದರು. ಕೋಲ್ಕತ್ತ ಪರ ಹರ್ಷಿತ್ ರಾಣ, ವರುಣ್, ಆರೋರ ಹಾಗೂ ಮೋಹಿನ್ ಅಲಿ ತಲಾ 2 ವಿಕೆಟ್ ಪಡೆದರು. ಕೆಕೆಆರ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ಆರಂಭದಲ್ಲಿಯೇ ಉಭಯ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಪರಾಭವಗೊಂಡಿವೆ. ಕೋಲ್ಕತ್ತ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಪರಾಭವಗೊಂಡಿತ್ತು. ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ಎದುರು ಸೋತಿತ್ತು. ರಾಯಲ್ಸ್ಗೆ ಎರಡನೇ ಸೋಲಾಯಿತು.