ಬನಾರಿ:ಶಕ್ತಿ ಯುವಕ ಮಂಡಲ ಬೆಳ್ಳಿಪ್ಪಾಡಿ ಹಾಗೂ ಊರಿನ ಎಲ್ಲ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜು.13ರಂದು ಭಾನುವಾರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಬಳಿಯ ಶ್ರೀ ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಇವರ
ಗದ್ದೆಯಲ್ಲಿ ಕೆಸರಗದ್ದೆ ಕ್ರೀಡಾಕೂಟ ನಡೆಯಲಿದೆ.
ಬೆಳಗ್ಗೆ ಗಂಟೆ 9ರಿಂದ ಸಂಜೆವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.ಜಯರಾಜ್ ಬಿ.ಎಚ್ ಇವರ ಅಧ್ಯಕ್ಷತೆಯಲ್ಲಿ ಕೆ.ಜನಾರ್ದನ್ ನಾಯಕ್ ಕೋಟಿಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸುವವರಿದ್ದಾರೆ. ವಿಶೇಷ ಆಕರ್ಷಣೆಯಾಗಿ ಧರ್ಮಚಾವಡಿ ಚಿತ್ರತಂಡವು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.














