ಟೊಕಿಯೋ: ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದ ವಿಭಾಗದಲ್ಲಿ ಅನುಭವಿ ಶೂಟರ್ಗಳಾದ ಎಲವೆನಿಲ್ ವಲಾರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಸಾ ಕೆ. ವಿನೋದ್ ಜೋಡಿಯು
ಅತ್ಯುತ್ತಮ ಗುರಿ ಇಡುವ ಮೂಲಕ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ. ಚೀನಾ ಚಿನ್ನದ ಪದಕ ಪಡೆದರೆ, ಜಪಾನ್ ಮೂರನೇ ಸ್ಥಾನ ಪಡೆಯಿತು. ಉಜ್ಬೇಕಿಸ್ತಾನ್ ವಿರುದ್ಧದ ಪೂಲ್ ಬಿ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು 19-0 ಗೋಲುಗಳ ಭರ್ಜರಿ ಹಾಗೂ ಐತಿಹಾಸಿಕ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.
ಮಹಿಳೆಯರ ಟ್ರೆಡಿಷನಲ್ 60 ಕೆಜಿ ಕ್ವಾರ್ಟರ್ ಫೈನಲ್ನಲ್ಲಿ ಸುಚಿಕಾ ತಾರಿಯಾಲ್ ಅವರು ಮಂಗೋಲಿಯಾದ ಅಲ್ತಂಚಿಮೆಗ್ ಬೈಗಾಲ್ಮಾ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಚಿತಗೊಂಡಿದೆ.
ಮಹಿಳೆಯರ ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್ ಕಂಚಿನ ಪದಕದ ಸುತ್ತಿನಲ್ಲಿ ಕ್ವಿಮ್ಸಿ ಡಿಸೋಜಾ ಕೂದಲೆಳೆಯ ಅಂತರದಲ್ಲಿ ಸೋತು ಪದಕ ವಂಚಿತರಾದರು.








