ಸುಳ್ಯ: ಇತ್ತೀಚಿನ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಕಾಡಾನೆಗಳು ವ್ಯಾಪಕವಾಗಿ ಕೃಷಿ ಹಾನಿ ಮಾಡುತಿದೆ. ಇದಕ್ಕೆ ಅರಣ್ಯ ಇಲಾಖೆ ವತಿಪರಿಹಾರ ನೀಡಲಾಗುತಿದೆ. ಕೃಷಿ ಹಾನಿ ಸಂಭವಿಸಿದ ಕೃಷಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪರಿಹಾರದ ಚೆಕ್ ವಿತರಿಸಿದರು. ಒಟ್ಟು
6 ಪ್ರಕರಣಗಳಲ್ಲಿ ಒಟ್ಟು 3,23,590 ರೂ. ಪರಿಹಾರವನ್ನು ವಿತರಿಸಲಾಯಿತು. ಸುಳ್ಯ ವಲಯದಲ್ಲಿ 2025-26ನೇ ಸಾಲಿನಲ್ಲಿ ಇದುವರೆಗೆ 51 ಪ್ರಕರಣಗಳಲ್ಲಿ 17,51,144 ರೂ ಪರಿಹಾರ ಪಾವತಿಸಲಾಗಿದೆ. 2024-25ನೇ ಸಾಲಿನಲ್ಲಿ 121 ಪ್ರಕರಣಗಳಲ್ಲಿ 33,59,508 ರೂ ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ 131 ಪ್ರಕರಣಗಳಲ್ಲಿ 42,16,568 ರೂ ಕೃಷಿ ಹಾನಿಗೆ ಪರಿಹಾರ ವಿತರಿಸಲಾಗಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.














