ಸುಳ್ಯ:ಸುಳ್ಯ ತಾಲೂಕು ಧ್ವನಿ ಜನನಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ
ಫ್ರೆಂಡ್ಸ್ ಕ್ಲಬ್ ಕಡಬ ತಂಡಕ್ಕೆ ರೋಚಕ ಜಯ. ಜಿದ್ದಾ ಜಿದ್ದಿನ ಹೋರಾಟದಲ್ಲಿ ಫ್ರೆಂಡ್ಸ್ ಕ್ಲಬ್ ಕಡಬ ತಂಡವು 24-16 ಪಾಯಿಂಟ್ಗಳ ಅಂತರದಲ್ಲಿ ತಮಿಳುನಾಡು ತೂತುಕುಡಿಯ ದೊರೈಸಿಂಗಂ ತಂಡವನ್ನು ಸೋಲಿಸಿತು.ತೀವ್ರ ಹೋರಾಟ ಕಂಡ ಪಂದ್ಯದಲ್ಲಿ ಪ್ರತಿ ಪಾಯಿಂಟ್ಗೆ ಎರಡೂ ತಂಡಗಳು ತೀವ್ರ ಕಾದಾಟ ನಡೆಸಿದವು. ಸಮಬಲದ ಹೋರಾಟ ಕಂಡ ಪಂದ್ಯದಲ್ಲಿ ಕಡಬ ಗೆದ್ದು ಬೀಗಿತು. ಪಂದ್ಯಾಟದಲ್ಲಿ ದೊರೈ ಸಿಂಗಂ ತಂಡಕ್ಕೆ ಎರಡನೇ ಸೋಲಾಯಿತು.









