ಸುಳ್ಯ: ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ನಡೆಯುತಿರುವ ಜೇಸಿ ಸಪ್ಥಾಹ ಕಾರ್ಯಕ್ರಮದ ಅಂಗವಾಗಿ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರಿನಲ್ಲಿ ಮಾದಕ ವ್ಯಸನಗಳ ಕುರಿತು
ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಈರಯ್ಯ ಡಿ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಕಾಲೇಜು ಆಂತರಿಕ ಗುಣಮಟ್ಟದ ಸಂಚಾಲಕ ಸ್ವಾಮಿ ಸರ್, ಉಪನ್ಯಾಸಕರಾದ ರಂಜಿತ್ ಪಿ.ಜೆ, ಸಪ್ಥಾಹ ನಿರ್ದೇಶಕಿ ಅನಿತಾ ಪಾನತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಶಂಕರ ಭಟ್ ಸಭಾದ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್, ರೆಡ್ ಕ್ರಾಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾಹಿತಿಯ ಪ್ರಯೋಜನ ಪಡೆದರು.