ಸುಳ್ತ:ವಿವಿಧ ಕಡೆಯ ಅಷ್ಟಮಿಯ ಕಾರ್ಯಕ್ರಮಗಳಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ಇದರ ವತಿಯಿಂದ ಸುಳ್ಯ ತಾಲೂಕು ಕಛೇರಿಯ ಸಭಾಂಗಣದಲ್ಲಿ ನಡೆದ ಕೃಷ್ಣಾಜಷ್ಟಾಮಿ ಉತ್ಸವದಲ್ಲಿ
ಭಾಗವಹಿಸಿದರು.ತಹಶೀಲ್ದಾರ್ ಜಿ.ಮಂಜುನಾಥ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
ಭಗವತಿ ಯುವಸೇವಾ ಸಂಘ ಬೂಡು ಕೇರ್ಪಳ , ಮಲ್ಲಿಕಾರ್ಜುನ ಭಜನಾ ಮಂಡಳಿ ತೊಡಿಕಾನ, ಕೃಷ್ಣ ಗೆಳೆಯರ ಬಳಗ ಗೂನಡ್ಕ, ಕೃಷ್ಣ ಜನ್ಮಾಷ್ಟಮಿಯ ಆಚರಣಾ ಸಮಿತಿ ಬಿಳಿಯಾರು, ಮಿತ್ರ ಬಳಗ ಕಾಯರ್ತೋಡಿ ಮುಂತಾದ ಕಡೆಗಳಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಕಾರ್ಯಕ್ರಮಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆರಂತೋಡು ಗ್ರಾಮಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಆರಂತೋಡು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ.ಭಾರತಿ ಉಳುವಾರು,ಜಿಲ್ಲಾ ಸಾಮಾಜಿಕ ಜಾಲಾತಾಣ ಸದಸ್ಯ
ಪ್ರಸಾದ್ ಕಾಟೂರು
ಉಪಸ್ಥಿತರಿದ್ದರು.