ಮಂಗಳೂರು: ಜನರ ಕುಂದು ಕೊರತೆಗಳಿಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಂತೆ ಜೂ.24ರಿಂದ ಜು.9ರವರೆಗೆ ದ.ಕ ಜಿಲ್ಲೆಯ 9 ತಾಲೂಕುಗಳಲ್ಲಿ
ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತಿತರ ಅಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಳ್ಯದಲ್ಲಿ ಜುಲೈ 9ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ. ಜೂ.24ರಂದು ಪೂ.10.30ಕ್ಕೆ ಬೆಳ್ತಂಗಡಿ, ಜೂ.26ರಂದು ಪೂ.10.30ಕ್ಕೆ ಉಳ್ಳಾಲ,ಅ.3ಕ್ಕೆ ಬಂಟ್ವಾಳ, 28ರಂದು ಪೂ.10.30ಕ್ಕೆ ಪುತ್ತೂರು, ಜು.1ರಂದು ಪೂ.10.30ಕ್ಕೆ ಮಂಗಳೂರು, ಜು.3ರಂದು 10.30ಕ್ಕೆ ಮೂಡಬಿದ್ರೆ, ಅಪರಾಹ್ನ 3ಕ್ಕೆ ಮೂಲ್ಕಿ, ಜುಲೈ 9ರಂದು ಪೂ.10.30ಕ್ಕೆಕಡಬ, ಅಪರಾಹ್ನ 3ಕ್ಕೆ ಸುಳ್ಯದಲ್ಲಿ ಜನಸ್ಪಂದನ ಸಭೆ ನಡೆಯಲಿದೆ