ಕಲ್ಲುಗುಂಡಿ:ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಇದರ ಪ್ರಥಮ ಕೌನ್ಸಿಲ್ ಸಭೆಯು ದಿನಾಂಕ ಸುಳ್ಯ ಝೋನ್ ನಾಯಕರ ನೇತೃತ್ವದಲ್ಲಿ ನಡೆಯಿತು. ಕೌನ್ಸಿಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಎಸ್ವೈಎಸ್ ಕಲ್ಲುಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್ರಿ ಯವರು ದುಆಃ ನೆರವೇರಿಸಿ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಝೋನ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಣ್ಣಮೂಲೆ ನೇತೃತ್ವದಲ್ಲಿ ಸಂಘಟನಾ ತರಗತಿ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಂಝ ಟಿ.ಎ ಕೊಯನಾಡು, ಪ್ರಧಾನ ಕಾರ್ಯದರ್ಶಿ ಯಾಗಿ ಸೈದಲವಿ ಚಡಾವು, ಫಿನಾನ್ಸ್ ಕಾರ್ಯದರ್ಶಿ ಯಾಗಿ ಅಬ್ದುಲ್ಲತೀಫ್ ಹೆಚ್.ಎ ಕಲ್ಲುಗುಂಡಿ, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಎಸ್.ಕೆ, ಜೊತೆ ಕಾರ್ಯದರ್ಶಿಯಾಗಿ ರಝಾಕ್ ಕೊಯನಾಡು ಅವರನ್ನೂ, ಸಮಿತಿ ಸದಸ್ಯರಾಗಿ ಅಬ್ದುಲ್ ಕಾದರ್ ಚಟ್ಟೆಕಲ್ಲು, ಅಬ್ದುಲ್ ಹಮೀದ್ ಸಂಪಾಜೆ, ಅಬ್ದುಲ್ ಖಾದರ್ ಸಂಪಾಜೆ, ಉಸ್ಮಾನ್ ಕಲ್ಲುಗುಂಡಿ, ಮುಹಮ್ಮದ್ ಹಾರಿಸ್ ಮತ್ತು ಎಸ್ಎಸ್ಎಫ್ ಪ್ರತಿನಿಧಿಯಾಗಿ ಆಶಿಕ್ ಕೆ.ಹೆಚ್ ಹಾಗೂ ಎಸ್ವೈಎಸ್ ಪ್ರತಿನಿಧಿಯಾಗಿ ಎ.ಎಂ.ಫೈಝಲ್ ಝುಹ್ರಿ ಅಲ್-ಫುರ್ಖಾನಿ ರವರುಗಳನ್ನೂ ಆಯ್ಕೆ ಮಾಡಲಾಯಿತು. ಸರ್ಕಲ್ ಕೌನ್ಸಿಲರ್ ಗಳಾಗಿ ಎ.ಎಂ ಅಬ್ದುಲ್ ಕಾದರ್ ನೆಲ್ಲಿಕುಮೇರಿ ಹಾಗೂ ಅಬ್ದುಲ್ ಕಾದರ್ ಸಂಪಾಜೆ ರವರನ್ನೂ ಆಯ್ಕೆ ಮಾಡಲಾಯಿತು. ನೂತನ ಪ್ರಧಾನ ಕಾರ್ಯದರ್ಶಿ ಸೈದಲವಿ ಸ್ವಾಗತಿಸಿ, ವಂದಿಸಿದರು.