ಸುಳ್ಯ:ಸುಳ್ಯ ತಾಲೂಕು ಜಾಲ್ಸೂರು-ಅಡ್ಕಾರು ಎಂಬಲ್ಲಿ ಪಯಸ್ವಿನಿ ನದಿ ತಟದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಔಲಿಯಾಗಳ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಎಪ್ರಿಲ್ 12 ರಿಂದ ಆರಂಭಗೊಂಡಿದ್ದು ಇಂದು ಸಮಾಪನಗೊಳ್ಳಲಿದೆ. ಎ.12ರಂದು ಜಾಲ್ಸೂರು ಉರೂಸ್ ಸಮಿತಿ ಅಧ್ಯಕ್ಷ
ಅಬ್ಬಾಸ್ ಹಾಜಿ ಕದಿಕಡ್ಕ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ದೊರೆಯಿತು. ರಾತ್ರಿ ನಡೆದ
ಉರೂಸ್ ಸಮಾರಂಭದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ದುಃವಾ ನೆರವೇರಿಸಿದರು.ಜಾಲ್ಸೂರು ಎಂ.ಜೆ.ಎಂ ಅಧ್ಯಕ್ಷ ಜಿ.ಪಿ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು.ಎಂಜೆಎಂ ಜಾಲ್ಸೂರು ಖತೀಬರಾರ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ಉದ್ಘಾಟನೆ ನೆರವೇರಿಸಿದರು.
ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಪ್ರಭಾಷಣ ಮಾಡಿದರು. ಹಬೀಬ್ ಹಿಮಮಿ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಶಾಹುಲ್ ಹಮೀದ್ ಸಖಾಫಿ ಸ್ವಾಗತಿಸಿದರು.
ಎ.13 ರಂದು ದ್ಸಿಕ್ರ್ ನೇರ್ಚೆ ನಡೆಯಿತು. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು.ದುಃವಾ ನೆರವೇರಿಸಿದರು.
ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಪ್ರಭಾಷಣ ಮಾಡಿದರು.
ಸಾಧಿಕ್ ಫಾಲಿಳಿ ಕುಂಬ್ರ, ಎಂಜೆಎಂ ಪ್ರ.ಕಾರ್ಯದರ್ಶಿ ಸಿಪಿ ರಝಾಕ್ ಉಪಸ್ಥಿತರಿದ್ದರು. ಮುಅಲ್ಲಿಂ ರಶೀದ್ ಮದನಿ ಸಂಪ್ಯ ಸ್ವಾಗತಿಸಿದರು.
ಇಂದು(ಎ.14ರಂದು) ಸಮಾರೋಪ ಸಮಾರಂಭ ನಡೆಯಲಿದೆ.
ಮೌಲುದ್ ಮಜ್ಜಿಸ್ ನೇತೃತ್ವವನ್ನು ಖುದ್ವತ್ತುಸಾದಾತ್ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ವಹಿಸುವರು.
ಶೈಖುನಾ ಮಹ್ಮೂದುಲ್ ಫೈಝಿ ವಾಲೆಮುಂಡೋವ್
ದುಃವಾ ನೆರವೇರಿಸುವರು.ಉರೂಸ್ ಸಮಿತಿ ಅಧ್ಯಕ್ಷ
ಅಬ್ಬಾಸ್ ಹಾಜಿ ಕದಿಕಡ್ಕ ಅಧ್ಯಕ್ಷತೆ ವಹಿಸುವರು. ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಭಾಷಣ ಮಾಡುವರು.ಎಂಜೆಎಂ ಜಾಲ್ಸೂರು ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ಉಪಸ್ಥಿತರಿರುವರು.