ಸುಳ್ಯ:ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆಯಾಗಿ ಶಶಿಕಲಾ ಎ. ನೀರಬಿದಿರೆ ಹಾಗೂ ಉಪಾಧ್ಯಕ್ಷರಾಗಿ ಬುದ್ಧನಾಯ್ಕ್ ಅವರು ಆಯ್ಕೆಯಾಗಿದ್ದಾರೆ. ಅವರ ಪರಿಚಯ ಇಲ್ಲಿದೆ.
ಶಶಿಕಲಾ ನೀರಬಿದಿರೆ:
ನಗರ ಪಂಚಾಯತ್ ಒಂದನೇ ವಾರ್ಡ್ ದುಗ್ಗಲಡ್ಕ ಕ್ಷೇತ್ರದಿಂದ ನಗರ ಪಂಚಾಯತ್ ಬಿಜೆಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ನಾಮನಿರ್ದೇಶಿತ ಸದಸ್ಯೆಯಾಗಿದ್ದರು.ಬಳಿಕ ಬಿಜೆಪಿ ಸೇರ್ಪಡೆಗೊಂಡು
ನಗರ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿ ಹಾಗೂ ಮಹಿಳಾ ಮೋರ್ಚಾದಲ್ಲಿ ಸಕ್ರೀಯರಾಗಿದ್ದಾರೆ.
ಪ್ರಸ್ತುತ ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ನಗರ ಪಂಚಾಯತ್ ಸ್ವರ್ಣ ಜಯಂತಿ ಶಹರೀ ರೋಜ್ಗಾರ್ ಯೋಜನೆಯ ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿದ್ದರು. ಕೆಎಂಎಫ್ನ ಜಾನುವಾರು ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪತಿ: ವಸಂತ, ಮಕ್ಕಳು: ಹರ್ಷಿತ್ ಎನ್.ವಿ, ಪುನಿತ್ ಎನ್.ವಿ. ಅವರೊಂದಿಗೆ ನೀರಬಿದಿರೆಯಲ್ಲಿ ವಾಸವಾಗಿದ್ದಾರೆ.
ಬುದ್ಧ ನಾಯ್ಕ್:
5ನೇ ವಾರ್ಡ್ ಹಳೆಗೇಟು ವಾರ್ಡ್ನಿಂದ ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾದ ಬುದ್ಧ ನಾಯ್ಕ್ ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
30 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬುದ್ಧ ನಾಯ್ಕ್ 20 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಬಿಜೆಪಿಯಲ್ಲಿ ಸಕ್ರೀಯರಾದ ಅವರು 5ನೇ ವಾರ್ಡ್ನಿಂದ ಆಯ್ಕೆಯಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾದ ಬುದ್ಧ ನಾಯ್ಕ್ ಮರಾಟಿ ಸಂಘದ ತಾಲೂಕು ಅಧ್ಯಕ್ಷರಾಗಿದ್ದರು.
ಪತ್ನಿ ಪುಷ್ಪಾವತಿ. ಲ್ಯಾಂಪ್ ಸೊಸೈಟಿಯಲ್ಲಿ ಗುಮಾಸ್ತೆಯಾಗಿದ್ದಾರೆ. ಮಕ್ಕಳು: ಅರ್ಚನಾ (ಎಸ್ಬಿಐ ಮಡಿಕೇರಿ), ಅಜಿತ್ ಕುಮಾರ್(ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ.